ಉಡುಪಿಯಲ್ಲಿ ಫುಟ್ಬಾಲ್​ ಕ್ರೀಡಾಂಗಣ ಶೀಘ್ರ

ಉಡುಪಿಯ ಮಣಿಪಾಲದಲ್ಲಿ ಆಯೋಜಿಸಿದ್ದ ಫುಟ್ಬಾಲ್​ ಪಂದ್ಯಾಟವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಎಂ.ಎ. ಗಫೂರ್​​, ಹರಿಪ್ರಸಾದ್​ ರೈ, ಹರೀಶ್​ ಕಿಣಿ, ಸದಾನಂದ್​ ಕಾಂಚನ್​, ಜಯವೀರ್​ ಇತರರಿದ್ದರು.
ಉಡುಪಿಯ ಮಣಿಪಾಲದಲ್ಲಿ ಆಯೋಜಿಸಿದ್ದ ಫುಟ್ಬಾಲ್​ ಪಂದ್ಯಾಟವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಎಂ.ಎ. ಗಫೂರ್​​, ಹರಿಪ್ರಸಾದ್​ ರೈ, ಹರೀಶ್​ ಕಿಣಿ, ಸದಾನಂದ್​ ಕಾಂಚನ್​, ಜಯವೀರ್​ ಇತರರಿದ್ದರು.
Published on

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್​ ಭರವಸೆ

* ಮಣಿಪಾಲದಲ್ಲಿ 'ಚಿವಾಸ್​ ಕಪ್​' ಕ್ರೀಡಾಕೂಟ ಉದ್ಘಾಟನೆ

ಉಡುಪಿ: ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಫುಟ್ಬಾಲ್​ ಪ್ರಮುಖವಾಗಿದೆ. ಅಂತಹ ಪಂದ್ಯಾಟವನ್ನು ಮಣಿಪಾಲದಲ್ಲಿ ಆಯೋಜಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ನೀಡಿದ್ದೀರಿ. ಉಡುಪಿ ಜಿಲ್ಲಾ ಅಮೆಚೂರ್​ ಅಥ್ಲೆಟಿಕ್​ ಅಸೋಸಿಯೇಷನ್​ನ ಅಧ್ಯಕ್ಷ ಹರಿಪ್ರಸಾದ್​ ರೈ ಅವರ ಮನವಿಯ ಮೇರೆಗೆ ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್​ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್​ ಭರವಸೆ ನೀಡಿದರು.
ಉಡುಪಿಯ ಚಿವಾಸ್​ ಫುಟ್ಬಾಲ್​ ಕ್ಲಬ್​ ವತಿಯಿಂದ ಮಣಿಪಾಲದ ಸಿಟಿ ಅರೆನಾದಲ್ಲಿ ಆಯೋಜಿಸಿದ್ದ 21 ವರ್ಷದೊಳಗಿನವರ 'ಚಿವಾಸ್​ ಕಪ್​' ಹೊನಲು ಬೆಳಕಿನ ಫುಟ್ಬಾಲ್​ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಪಂದ್ಯಾಟ ಉದ್ಘಾಟಿಸಿ, ಶುಭ ಹಾರೈಸಿದರು.
ಉಡುಪಿ ಜಿಲ್ಲಾ ಅಥ್ಲೆಟಿಕ್​ ಅಸೋಸಿಯೇಷನ್​ನ ಅಧ್ಯಕ್ಷ ಹರಿಪ್ರಸಾದ್​ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲೆವೂರು ಗ್ರಾಪಂ ಅಧ್ಯಕ್ಷ ಹರೀಶ್​ ಕಿಣಿ, ಸದಾನಂದ್​ ಕಾಂಚನ್​, ಜಯವೀರ್​ ಇನ್ನಿತರರು ಉಪಸ್ಥಿತರಿದ್ದರು.
"

ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ ಫುಟ್ಬಾಲ್​ ಆಗಿದೆ. 200ಕ್ಕೂ ಅಧಿಕ ರಾಷ್ಟ್ರಗಳು ಫುಟ್ಬಾಲ್​ ನೆಚ್ಚಿಕೊಂಡಿದೆ. ಅಲ್ಲದೆ, ಈ ಕ್ರೀಡೆಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಉಡುಪಿ ಜಿಲ್ಲೆಯು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಫುಟ್ಬಾಲ್​ ಕ್ರೀಡೆಯಲ್ಲೂ ಗುರುತಿಸಿಕೊಳ್ಳಲು 'ಚಿವಾಸ್​ ಕಪ್​' ಆಯೋಜಿಸಲಾಗಿದೆ.

— ಹರಿಪ್ರಸಾದ್​ ರೈ. ಉಡುಪಿ ಜಿಲ್ಲಾ ಅಥ್ಲೆಟಿಕ್​ ಅಸೋಸಿಯೇಷನ್​ನ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net