ಬೈಕಾಡಿಯಲ್ಲಿ ಆಯೋಜಿಸಿದ್ದ ಬ್ರಹ್ಮಾವರ ವಲಯದ ರಿಕ್ಷಾ ಚಾಲಕರು ಮತ್ತು ಮಾಲೀಕರ ಕುಂದು-ಕೊರತೆ ಸಭೆಯಲ್ಲಿ ಶಾಶಕ ಯಶ್ಪಾಲ್ ಸುವರ್ಣ ಮಾತನಾಡಿದರು. ಬಿರ್ತಿ ರಾಜೇಶ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಹರಿಮಕ್ಕಿ ರತ್ನಾಕರ್ ಶೆಟ್ಟಿ, ಭಾಸ್ಕರ್ ಪೂಜಾರಿ, ಸೂರ್ಯ ಪೂಜಾರಿ, ರಾಜೀವ್ ಕುಲಾಲ್ ಇದ್ದರು.
Published on:
Copied
Follow Us
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭರವಸೆ
* ಬ್ರಹ್ಮಾವರದಲ್ಲಿ ಕುಂದು-ಕೊರತೆ, ಸಮಾಲೋಚನಾ ಸಭೆ
ಉಡುಪಿ: ಬ್ರಹ್ಮಾವರ ಭಾಗದ ರಿಕ್ಷಾ ಚಾಲಕರು ಮತ್ತು ಮಾಲೀಕರ ಪ್ರಮುಖ ಬೇಡಿಕೆಯಂತೆ ಧೂಪದಕಟ್ಟೆಯಿಂದ ಉಪ್ಪಿನಕೋಟೆವರೆಗೆ ಸರ್ವಿಸ್ ರಸ್ತೆ, ರಿಕ್ಷಾ ಬಾಡಿಗೆ ದರ ಪರಿಷ್ಕರಣೆ, ಸಿಎನ್ಜಿ ನಿರಂತರ ಪೂರೈಕೆಗೆ ಕ್ರಮ ವಹಿಸಲಾಗುವುದು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ತರ ಪಾತ್ರವಹಿಸುವ ತಮ್ಮೆಲ್ಲ ಬೇಡಿಕೆ ಈಡೇರಿಸಲು ಹಾಗೂ ಪೂರಕ ಮೂಲ ಸೌಕರ್ಯ ಒದಗಿಸಲು ವಿಶೇಷ ಆದ್ಯತೆ ನೀಡುವುದಾಗಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭರವಸೆ ನೀಡಿದರು.
ಬೈಕಾಡಿ ದೇವಕಿ ಕನ್ವೆನ್ಷನ್ ಸಭಾಂಗಣದಲ್ಲಿ ಭಾನುವಾರ (ಜು.19) ಸಂಜೆ ಆಯೋಜಿಸಿದ್ದ ಬ್ರಹ್ಮಾವರ ವಲಯದ ರಿಕ್ಷಾ ಚಾಲಕರು ಮತ್ತು ಮಾಲೀಕರ ಕುಂದು-ಕೊರತೆಗಳ ಹಾಗೂ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ವಾರಕ್ಕೊಮ್ಮೆ ಆರ್ಟಿಒ ಕ್ಯಾಂಪ್
ತಾಲೂಕು ಕೇಂದ್ರವಾಗಿರುವ ಬ್ರಹ್ಮಾವರದಲ್ಲಿ ವಾರದಲ್ಲಿ ಒಂದು ದಿನ ಸಾರಿಗೆ ಇಲಾಖೆಗೆ ಸಂಬಂಧಿತ ಕೆಲಸ&ಕಾರ್ಯ ಮಾಡಿಕೊಳ್ಳುವಂತಾಗಲು ಆರ್ಟಿಒ ಕ್ಯಾಂಪ್ ನಡೆಸಲಾಗುವುದು. ಅಲ್ಲದೆ, ರಿಕ್ಷಾ ನಿಲ್ದಾಣದಲ್ಲಿ ಶೆಲ್ಟರ್ ನಿಮಾರ್ಣಕ್ಕೆ ಆದ್ಯತೆಯ ಮೇಲೆ ಪ್ರಯತ್ನಿಸುವುದಾಗಿ ಯಶ್ಪಾಲ್ ತಿಳಿಸಿದರು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿದರು.
ಬ್ರಹ್ಮಾವರ ವಲಯದ ವಿವಿಧ ರಿಕ್ಷಾ ನಿಲ್ದಾಣದ ಸುಮಾರು 200 ಚಾಲಕರು ಪಾಲ್ಗೊಂಡಿದ್ದರು. ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತಾಗಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಉಡುಪಿಯ ಹಿರಿಯ ವಕೀಲ ಹರಿಮಕ್ಕಿ ರತ್ನಾಕರ್ ಶೆಟ್ಟಿ, ರಿಕ್ಷಾ ಚಾಲಕರ ಸಂಘದ ಮುಖಂಡರಾದ ಭಾಸ್ಕರ್ ಪೂಜಾರಿ, ಸೂರ್ಯ ಪೂಜಾರಿ ಉಪಸ್ಥಿತರಿದ್ದರು.
ಆರೂರು ಗ್ರಾಪಂ ಮಾಜಿ ಅಧ್ಯಕ್ಷ ರಾಜೀವ್ ಕುಲಾಲ್ ಸ್ವಾಗತಿಸಿದರು. ಕಮಲಾಕ್ಷ ಹೆಬ್ಬಾರ್ ವಂದಿಸಿದರು. ಮನೋಜ್ ಶೆಟ್ಟಿ ಕಳ್ತೂರು ಕಾರ್ಯಕ್ರಮ ನಿರೂಪಿಸಿದರು.
"
ರಿಕ್ಷಾ ಚಾಲಕ&ಮಾಲೀಕರ ತುರ್ತು ಬೇಡಿಕೆಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಶೀಘ್ರವಾಗಿ ಸ್ಪಂದಿಸುತ್ತಾರೆ. ಅವರ ಕಾರ್ಯವೈಖರಿಗೆ ಪೂರಕವಾಗಿ ಅಗತ್ಯ ಸಂದರ್ಭದಲ್ಲಿ ರಿಕ್ಷಾ ಚಾಲಕರಿಗೆ ಉಚಿತವಾಗಿ ಕಾನೂನು ಸಲಹೆ ನೀಡಲು ಸದಾ ಸಿದ್ಧನಿದ್ದೇನೆ.