ನಗರಸಭೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನತೆ ಶಾಂತಿಪ್ರಿಯರು ಹಾಗೂ ಸಂಸ್ಕಾರವಂತರು. ಬಿಜೆಪಿಯ ಎಲ್ಲಾ ಜನಪ್ರತಿನಿಧಿಗಳು ಯಾವುದೇ ಧರ್ಮ, ಜಾತಿ ನೋಡದೆ ಜನರ ಕೆಲಸ ಮಾಡುತ್ತಿದ್ದಾರೆ. ದೇಶವಿರೋಧಿಗಳು ಮತ್ತು ಗೋ ಹಂತಕರ ಬಗ್ಗೆ ಮಾತ್ರ ನಮ್ಮ ವಿರೋಧವಿದೆ. ಘಟನೆಯ ಸತ್ಯ ಸತ್ಯತೆ ತಿಳಿಯದೆ ಮಾಧ್ಯಮದ ಎದುರು ಬಿಜೆಪಿ ಪಕ್ಷಕ್ಕೆ ಸೌಹಾರ್ದತೆಯ ಪಾಠ ಮಾಡಲು ಹೋಗಿ ಉಸ್ತುವಾರಿ ಸಚಿವರು ಪೇಚಿಗೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.