ನಾಪತ್ತೆಯಾಗಿದ್ದ ಯುವತಿ ಯುವಕನೊಂದಿಗೆ ಪತ್ತೆ

yuvajodi
yuvajodi
Published on
ಪುತ್ತೂರು ಗ್ರಾಮಾಂತರ: ಮನೆಯಿಂದ ನಾಪತ್ತೆಯಾಗಿದ್ದ, ಪ್ರೀತಿಸುತ್ತಿದ್ದ ಯುವಜೋಡಿಯೊಂದನ್ನು ಸಂಪ್ಯ ಠಾಣೆಯ ಪೊಲೀಸರು ಪತ್ತೆ ಮಾಡಿ ಶನಿವಾರ ರಾತ್ರಿ ಪೊಲೀಸ್ ಠಾಣೆಗೆ ಕರೆತಂದಿದ್ದು, ಯುವತಿ ತನ್ನ ಪಾಲಕರೊಂದಿಗೆ ಮನೆಗೆ ಹೋಗಲು ನಿರಾಕರಿಸಿ ಪ್ರೀತಿಸಿದ ಯುವಕನೊಂದಿಗೆ ಹೋಗಿ ಬಾಳುವುದಾಗಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಆಕೆಯನ್ನು ಆತನ ಜತೆ ಕಳುಹಿಸಲಾಗಿದೆ.
ಪುತ್ತೂರು ತಾಲೂಕಿನ ಬಲ್ನಾಡಿನ ಮುಸ್ಲಿಂ ಸಮುದಾಯದ ಯುವತಿ ಬಂಟ್ವಾಳ ತಾಲೂಕಿನ ಅಳಕೆಮಜಲು ನಿವಾಸಿ ತನ್ನದೆ ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದರು. ಈ ನಡುವೆ ಆಕೆ ಎರಡು ದಿನಗಳ ಹಿಂದೆ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ಆಕೆಯ ಪಾಲಕರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಸಂಪ್ಯ ಠಾಣೆಯ ಪೊಲೀಸರು, ನಾಪತ್ತೆಯಾಗಿದ್ದ ಯುವತಿ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮಂಗಳೂರಿನ ಕೊಣಾಜೆಯಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರಿಬ್ಬರನ್ನು ಶನಿವಾರ ಪತ್ತೆ ಮಾಡಿ ಪೊಲೀಸ್ ಠಾಣೆಗೆ ಕರೆತಂದಿದ್ದರು. ಈ ವಿಚಾರ ತಿಳಿದ ಯುವತಿ ಮತ್ತು ಯುವಕನ ಕಡೆಯವರು ಸಂಪ್ಯ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು.
ಯುವತಿ ಮತ್ತು ಯುವಕನ ಕಡೆಯ ಕೆಲಮಂದಿ ಪ್ರಮುಖರು ಈ ವಿಚಾರದಲ್ಲಿ ಮಾತುಕತೆ ನಡೆಸಿದ್ದರು. ಆದರೆ ಯುವತಿ ತನ್ನ ಪಾಲಕರೊಂದಿಗೆ ಮನೆಗೆ ಹೋಗಲು ನಿರಾಕರಿಸಿ, ತಾನು ಪ್ರೀತಿಸುತ್ತಿರುವ ಯುವಕನೊಂದಿಗೆ ಹೋಗುವುದಾಗಿ ಪಟ್ಟು ಹಿಡಿದ ಪರಿಣಾಮವಾಗಿ ಪೊಲೀಸರು ಆಕೆಯನ್ನು ಆತನೊಂದಿಗೆ ಕಳುಹಿಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net