ನಾಪತ್ತೆಯಾಗಿದ್ದಾತನ ಶವ ನದಿಯಲ್ಲಿ ಪತ್ತೆ

Death
Death
Published on
ಮೂಡುಬಿದಿರೆ: ನಾಪತ್ತೆಯಾಗಿದ್ದ ವಾಲ್ಪಾಡಿ ಜೋಗೊಟ್ಟು ನಿವಾಸಿ ಭೋಜ ಪೂಜಾರಿ (55) ಮೃತದೇಹ ಹನ್ನೆರಡು ಕವಲು ಸಮೀಪದ ನದಿಯಲ್ಲಿ ಪತ್ತೆಯಾಗಿದೆ.
ಭೋಜ ಪೂಜಾರಿ ಮನೆಯಿಂದ ತೆರಳಿದ ಬಳಿಕ ಮರಳಿರಲಿಲ್ಲ. ಬಳಿಕ ನಡೆಸಿದ ಹುಡುಕಾಟದ ವೇಳೆ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತರು ಅವಿವಾಹಿತರಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net