ಬೆಣ್ಗೆರೆ ನಾಗ ದೇವಸ್ಥಾನ ಬಳಿ ನಿವಾಸಿ ವಸಂತ ಪೂಜಾರಿ ಅವರ ಜತೆ ವಾಸವಾಗಿರುವ ದಿ.ಹರೀಶ್ ಹಾಗೂ ದಿ.ಶ್ವೇತಾ ಪೂಜಾರಿ ದಂಪತಿಯ 2ನೇ ಪುತ್ರ ಸಮೃದ್ಧ ಸಂಜೆ ಶಾಲೆಯಿಂದ ಮನೆಗೆ ಬಂದು ಮಕ್ಕಳೊಂದಿಗೆ ಆಟವಾಡುತ್ತಿದ್ದನು. ಕತ್ತಲಾದರೂ ಮನೆಗೆ ಬಾರದಿದ್ದಾಗ ಸುತ್ತಮುತ್ತ ಹುಡುಕಾಡಿದ್ದರು. ಅಲ್ಲೂ ಸಿಗದಿದ್ದಾಗ ಠಾಣೆಗೆ ವಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ಪವನ್ ನಾಯಕ್ ಹಾಗೂ ತಂಡ ಬಾಲಕನಿಗಾಗಿ ಶೋಧ ಕಾರ್ಯ ನಡೆಸಿದರು. ಈ ವೇಳೆ ಬಾಲಕ ಮನೆ ಸಮೀಪದ ಬಂಡೆ ಕಲ್ಲಿನ ಕೆಳಗಡೆ ಪೊಟರೆಯೊಳಗೆ ಮಲಗಿರುವುದು ಪತ್ತೆಯಾಗಿದೆ. ಬಾಲಕನ್ನು ರಕ್ಷಿಸಿ ಮನೆಯವರಿಗೆ ಒಪ್ಪಿಸಿದ್ದಾರೆ.