

ಉಡುಪಿ: ಆಧುನಿಕ ವ್ಯವಸ್ಥೆಯಲ್ಲಿ ಜನರ ಆಯ್ಕೆಗೆ ಅನುಗುಣವಾಗಿ ಹಾಗೂ ಸಾಂಪ್ರದಾಯಿಕ ಉಡುಪುಗಳನ್ನು ದೀಪಾವಳಿಯ ಸಂದರ್ಭದಲ್ಲಿ ಮಿನಿಸ್ಟರ್ ವೈಟ್ ಮಳಿಗೆ ಆಕರ್ಷಣೀಯ ಕೊಡುಗೆ ನೀಡಿದೆ. ಕೃಷ್ಣನ ನಾಡು ಉಡುಪಿಯಲ್ಲಿ ಈ ಸುಂದರ ಮಳಿಗೆ ಆರಂಭಗೊಂಡಿರುವುದು ಸಂತಸ ತಂದಿದ್ದು, ಇಲ್ಲಿನ ಸಂಸ್ಕೃತಿ ಉಳಿಸುವಲ್ಲಿಯೂ ಪೂರಕವಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಕಡಿಯಾಳಿ (ಉಡುಪಿ-ಮಣಿಪಾಲ ಮುಖ್ಯ ರಸ್ತೆ)ಯಲ್ಲಿ ಹಿಮಾಲಯ ಪ್ರೆಸ್ಟೀಜ್ ಬಿಲ್ಡಿಂಗ್ನಲ್ಲಿ ಒಟ್ಟೋ ಕ್ಲಾಥಿಂಗ್ ಪ್ರೈ.ಲಿ.ನವರ ಪುರುಷರ ಸಾಂಪ್ರದಾಯಿಕ ಉಡುಪುಗಳ ಪ್ರೀಮಿಯಂ ಬ್ರ್ಯಾಂಡ್ ಆದ ದೇಶದ 79ನೇ ಹಾಗೂ ಕರ್ನಾಟಕದ 11ನೇ ಮಳಿಗೆ ಮಿನಿಸ್ಟರ್ ವೈಟ್ಅನ್ನು ಶುಕ್ರವಾರ (ನ.6) ಉದ್ಘಾಟಿಸಿ ಮಾತನಾಡಿದರು.
ದೀಪಾವಳಿಗೆ ಕೊಡುಗೆ
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಆರೋಗ್ಯ-ಶಿಕ್ಷಣ, ಧಾರ್ಮಿಕ ಕ್ಷೇತ್ರದ ಮೂಲಕವಾಗಿ ಉಡುಪಿಯು ದೇಶದಲ್ಲಿಯೇ ಪ್ರಸಿದ್ಧವಾಗಿದೆ. ಇದೀಗ ಸಾಂಪ್ರದಾಯಿಕ ಉಡುಪುಗಳ ಲಭ್ಯತೆಯ ಮೂಲಕವೂ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿದೆ. ದೀಪಾವಳಿ ಹಬ್ಬದ ಸಡಗರಕ್ಕೆ ಮಿನಿಸ್ಟರ್ ವೈಟ್ ಕೊಡುಗೆಯಾಗಿ ಬಂದಿದೆ. ಈ ಮಳಿಗೆಯ ಮುಖಾಂತರ ಸಾಂಪ್ರದಾಯಿಕ ಶೈಲಿಯ ಉಡುಗೆ ಇನ್ನಷ್ಟು ಖ್ಯಾತಿಗೊಳ್ಳಲಿ ಎಂದು ಹಾರೈಸಿದರು.
ಭಾರತೀಯ ಜೀವನ ಶೈಲಿ
ಸಂಸ್ಥೆಯ ಕರ್ನಾಟಕದ ಮುಖ್ಯಸ್ಥ ಜೀವನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯ ಟ್ಯಾಗ್ಲೈನ್ 'ಪರಂಪರೆ' ಎಂದೇ ಇದೆ. ನಮ್ಮತನ ಮರೆಯಬಾರದು. ಪಂಚೆ ಧರಿಸುವುದು ಭಾರತೀಯ ಜೀವನ ಶೈಲಿ. ಅದನ್ನು ಜನರು ಮತ್ತೆ ಆಚರಿಸುವಂತಾಗಬೇಕು ಎನ್ನುವುದೇ ಮಿನಿಸ್ಟರ್ ವೈಟ್ನ ಆಶಯ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಕಾರ್ತಿಕೇಯನ್ ಜ್ಯೋತಿರ್ಲಿಂಗಮ್, ಉದ್ಯಮದ ಪ್ರಮುಖರು, ಹಿತೈಷಿಗಳು, ಮಳಿಗೆಯ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ತೇಜೇಶ ಜೆ. ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.
ಮಿನಿಸ್ಟರ್ ಮಳಿಗೆಯಲ್ಲಿ ಪ್ರೀಮಿಯಂ ಧೋತಿಗಳು, ಪಂಚಕಚ್ಚೆ, ರೆಡಿಮೇಡ್ ಧೋತಿ, ಸಾಂಪ್ರದಾಯಿಕ ಶೈಲಿಯ ಶರ್ಟ್ಗಳು ಲಭ್ಯವಿದೆ. ಸಿಂಗಲ್ ಹಾಗೂ ಡಬಲ್ ಸೈಜ್ನಲ್ಲಿಯೂ ಸಹ ಧೋತಿಗಳಿವೆ. ಮದುವೆ, ಶುಭ ಸಮಾರಂಭಗಳ ವಿಶೇಷ ಉಡುಪು, ಪ್ರೀಮಿಯಂ ಬಟ್ಟೆ ಮತ್ತು ವಿವಿಧ ಪರಿಕರಗಳ ಅತ್ಯುತ್ತಮ ಸಂಗ್ರಹ ಲಭ್ಯವಿದೆ. ಭಾರತೀಯ ಪರಂಪರೆ ಮತ್ತು ಆಧುನಿಕ ಶೈಲಿಯ ಉಡುಪು ಒಂದೇ ಸೂರಿನಡಿ ಲಭ್ಯವಾಗಿಸುವುದು ಸಂಸ್ಥೆಯ ಉದ್ದೇಶ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಆಧುನಿಕ ಸೊಬಗಿನೊಂದಿಗೆ ಸಂಯೋಜಿಸಿ, ಸಂಪ್ರದಾಯಕ್ಕೆ ಹೊಸ ಮೆರುಗು ನೀಡುವುದು 'ಮಿನಿಸ್ಟರ್ ವೈಟ್''ನ ವಿಶೇಷತೆ.