ಕಂದಾಯ ಇಲಾಖೆಯ ಯೋಜನೆಗಳಾದ ಹಕ್ಕುಪತ್ರ, ದರಖಾಸ್ತು ಪೋಡಿ, ಇ-ಖಾತಿಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ ಜಿಲ್ಲೆಯ ತಹಸೀಲ್ದಾರರು ಹಾಗೂ ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರುಡೇಕರ್ 4ನೇ ಸ್ಥಾನ (ಶೇ.99 ಪ್ರಗತಿ), ಕಾರ್ಕಳ ತಹಸೀಲ್ದಾರ್ ಪ್ರದೀಪ್ ಆರ್. 6ನೇ ಸ್ಥಾನ (ಶೇ.97ಪ್ರಗತಿ), ಶ್ರೀಕಲಾ (ಎಡಿಎಲ್ಆರ್, ಕಾರ್ಕಳ) 8ನೇ ಸ್ಥಾನ (ಶೇ.90 ಪ್ರಗತಿ), ಉಡುಪಿ ತಹಸೀಲ್ದಾರ್ ಗುರುರಾಜ್ ಪಿ.ಆರ್. 14ನೇ ಸ್ಥಾನ (ಶೇ.94 ಪ್ರಗತಿ).