ಲಂಚ ಸ್ವೀಕರಿಸುತ್ತಿದ್ದ ಮಿನರಲ್ ರೆವನ್ಯೂ ಇನ್‌ಸ್ಪೆಕ್ಟರ್ ಅರೆಸ್ಟ್

BRIBE
BRIBE
Published on
ಕಾಸರಗೋಡು: ರಾಜ್ಯವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ‘ವಿಜಿಲೆನ್ಸ್ ಪ್ರಾಜೆಕ್ಟ್ ಥಂಡರ್’ ಯೋಜನೆಯನ್ವಯ ನಡೆಸಿದ ಕಾರ್ಯಾಚರಣೆಯಲ್ಲಿ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ಜಿಲ್ಲಾ ಮೈನಿಂಗ್ ಆ್ಯಂಡ್ ಜಿಯೋಲಜಿ ಕಚೇರಿಯ ಮಿನರಲ್ ರೆವನ್ಯೂ ಅಧಿಕಾರಿ, ಕಣ್ಣೂರು ಚಿರಕುನ್ನು ನಿವಾಸಿ ಪಿ.ಪಿ.ಶ್ರೀಧರನ್ (49) ಎಂಬುವರನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಕಣ್ಣೂರು ವಿಜಿಲೆನ್ಸ್ ಡಿವೈಎಸ್ಪಿ ಬಾಬು ಪೆರಿಂಜೋತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಕಣ್ಣೂರು ಚೆರುಕುನ್ನು ನಿವಾಸಿಯೊಬ್ಬರು ಉದ್ದಿಮೆ ನಡೆಸಲು ಅನುಮತಿಗಾಗಿ 2025 ಜೂನ್ ತಿಂಗಳಲ್ಲಿ ಜಿಯೋಲಜಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಆದರೆ ಅನುಮತಿ ನೀಡಲು ವಿಳಂಬವಾಗುತ್ತಿರುವ ಬಗ್ಗೆ ವಿಜಿಲೆನ್ಸ್‌ಗೆ ದೂರು ಸಲ್ಲಿಸಿದ್ದರು. ಜಿಯೋಲಜಿ ಕಚೇರಿ ಅಧಿಕಾರಿಗಳ ಸೂಚನೆ ಪ್ರಕಾರ ದೂರುದಾರರು ಸಂಬಂಧಪಟ್ಟ ದಾಖಲೆ ಹಾಜರುಪಡಿಸಿದರೂ ಅನುಮತಿ ಪತ್ರ ನೀಡದೆ 30 ಸಾವಿರ ರೂ. ಹಣಕ್ಕಾಗಿ ಅಧಿಕಾರಿ ಬೇಡಿಕೆಯಿರಿಸಿದ್ದರು. ನಂತರ 15 ಸಾವಿರ ರೂ.ಗೆ ಮಾತುಕತೆ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದ ಕಣ್ಣೂರು ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net