ಮಧ್ಯಂತರ ರಜೆ ಅಂತ್ಯ; ಶಾಲೆ ಪುನರಾರಂಭ

ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್​ ತಿಂಗಳ ಹಾಗೂ ದಸರಾ ರಜಾ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಆಗಮಿಸಿದರು.
ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್​ ತಿಂಗಳ ಹಾಗೂ ದಸರಾ ರಜಾ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಆಗಮಿಸಿದರು.
Published on: 

* ಪಠ್ಯಕ್ರಮದಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳು

ಉಡುಪಿ: ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅ.2ರಿಂದ ನೀಡಿದ್ದ ಮಧ್ಯಂತರ ರಜಾ ಹಾಗೂ ನವರಾತ್ರಿ ಹಬ್ಬದ ದಸರಾ ರಜಾ ಅ.21ಕ್ಕೆ ಅಂತ್ಯಗೊಂಡಿದ್ದು, ಗುರುವಾರ (ಅ.22)ದಿಂದ ಮತ್ತೆ ಶಾಲೆಗಳು ಪುನರಾರಂಭಗೊಂಡಿತು.

ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಪ್ರಾಥಮಿಕ ಹಾಗೂ ಪ್ರೌಢ ವಿಭಾಗ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಆಗಮಿಸಿ ಪಠ್ಯಕ್ರಮದಲ್ಲಿ ತೊಡಗಿಕೊಂಡರು.

ರಾಜ್ಯಾದ್ಯಂತ ದಸರಾ ರಜೆ ಇನ್ನೂ ಒಂದು ದಿನ ವಿಸ್ತರಣೆಗೊಂಡು ಗುರುವಾರವೂ ಸಹ ಶಾಲೆಗಳಿಗೆ ರಜಾ ನೀಡಬೇಕೆಂಬ ಬೇಡಿಕೆ ಇಡಲಾಗಿತ್ತು. ದಸರಾ ರಜೆಯನ್ನು ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಂದಿಟ್ಟಿದ್ದ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದ್ದರಿಂದ ಗುರುವಾರದಿಂದಲೇ ಶಾಲೆ ಪುನರಾರಂಭಗೊಂಡಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಗುರುವಾರವೂ ಶಾಲೆಗಳಿಗೆ ರಜೆ ವಿಸ್ತರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net