ಜಾಹಿರಾತು ಅವಲಂಬನೆ ಮಾಧ್ಯಮ ಸ್ವಾತಂತ್ರ್ಯಕ್ಕೆ ಸವಾಲು

ಎಡಿಟರ್ಸ್​ ಗಿಲ್ಡ್​ ಮುಖ್ಯಸ್ಥ ಅನಂತ್​ ನಾಥ್​ ಅವರನ್ನು ಗೌರವಿಸಲಾಯಿತು.
ಎಡಿಟರ್ಸ್​ ಗಿಲ್ಡ್​ ಮುಖ್ಯಸ್ಥ ಅನಂತ್​ ನಾಥ್​ ಅವರನ್ನು ಗೌರವಿಸಲಾಯಿತು.
Published on
ಉಡುಪಿ: ಭಾರತೀಯ ಮಾಧ್ಯಮವು ತನ್ನ ಇತಿಹಾಸದಲ್ಲಿ ಅತ್ಯಂತ ಸವಾಲಿನ ಕ್ಷಣಗಳನ್ನು ಎದುರಿಸುತ್ತಿದೆ. ಭಾರತದಲ್ಲಿ ಪತ್ರಿಕೆ ವೆಚ್ಚಗಳನ್ನು  ಸರ್ಕಾರ ಮತ್ತು ಖಾಸಗಿ ಜಾಹೀರಾತುಗಳಿಂದ  ಮೂಲಕ ಭರಿಸಲಾಗುತ್ತಿದ್ದು, ಓದುಗರಿಗೆ ಸಬ್ಸಿಡಿ ದರದಲ್ಲಿ ಪತ್ರಿಕೆ ನೀಡಲಾಗುತ್ತಿದೆ. ಈ ಅವಲಂಬನೆಯು ಸಂಪಾದಕೀಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ದಿ ಕ್ಯಾರವಾನ್​ನ ಸಂಪಾದಕ ಹಾಗೂ ಎಡಿಟರ್ಸ್​ ಗಿಲ್ಡ್​ ಮುಖ್ಯಸ್ಥ ಅನಂತ್​ ನಾಥ್​ ಹೇಳಿದರು. 
 ಶುಕ್ರವಾರ ಮಣಿಪಾಲ್​ ಇನ್​ಸ್ಟಿಟ್ಯೂಟ್​ ಆಫ್​ ಕಮ್ಯುನಿಕೇಷನ್​ ವತಿಯಿಂದ ಎಂ.ವಿ. ಕಾಮತ್​ 10ನೇ  ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು. 
ಭಾರತದಲ್ಲಿ ಐದು ರೂ. ಪತ್ರಿಕೆಗೆ ಕೀನ್ಯಾ ಅಥವಾ ಪಾಕಿಸ್ತಾನದಲ್ಲಿ ಐವತ್ತು ರೂಪಾಯಿ ವೆಚ್ಚವಾಗುತ್ತದೆ. ಓದುಗರು ಹೆಚ್ಚಿನ ಹಣ ಪಾವತಿಸುವ ಸ್ಥಳದಲ್ಲಿ ಪತ್ರಿಕೆಗಳಿಗೆ ಹೊಣೆಗಾರಿಕೆ ಸಾರ್ವಜನಿಕ ಬದ್ಧತೆ ಇರುತ್ತದೆ. ಆದರೆ ಭಾರತದಲ್ಲಿ ಪತ್ರಿಕೆಗಳ ಮೊದಲ ಗ್ರಾಹಕರು ಜಾಹೀರಾತುದಾರರು ಮತ್ತು ಸರ್ಕಾರ.  ಸರ್ಕಾರಿ ಜಾಹೀರಾತುಗಳು ಪ್ರಮುಖ ಆದಾಯದ ಮೂಲವಾಗಿದ್ದಾಗ ಸರ್ಕಾರಗಳು ಪತ್ರಿಕಾ ಸ್ವಾತಂತ್ರ್ಯವನ್ನು ನಿಗ್ರಹಿಸಲು ಅವಕಾಶ ನೀಡುತ್ತದೆ. ವಾಕ್​ ಸ್ವಾತಂತ್ರ್ಯಕ್ಕಾಗಿ ಕಾನೂನುಬದ್ಧವಾಗಿ ಮತ್ತು ಸಾಮೂಹಿಕವಾಗಿ ಹೋರಾಟವನ್ನು ನಡೆಸಬೇಕು. ಅತ್ಯಂತ ಉದಾರವಾದಿ ರಾಜ್ಯಗಳು ಸಹ ಪತ್ರಿಕಾವನ್ನು ನಿಯಂತ್ರಿಸಲು ಪ್ರಯತ್ನಿಸಿವೆ ಎಂದು ಹೇಳಿದರು.

ಮಾಹೆ ಪ್ರೊ- ವೈಸ್​-ಚಾನ್ಸೆಲರ್​ ಡಾ. ನಾರಾಯಣ ಸಭಾಹಿತ್​ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎಂಐಸಿ ನಿರ್ದೇಶಕಿ ಡಾ. ಶುಭಾ ಎಚ್​.ಎಸ್​. ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net