ಮನುಷ್ಯನ ಆಂತರ್ಯದಲ್ಲಿ ಪರಿಪೂರ್ಣತೆ: ಸ್ವಾಮಿ ವೀರೇಶಾನಂದ

ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ವೀರೇಶಾನಂದ ಸರಸ್ವತಿ  ಉದ್ಘಾಟಿಸಿದರು.
ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ವೀರೇಶಾನಂದ ಸರಸ್ವತಿ ಉದ್ಘಾಟಿಸಿದರು.
Published on
ಉಡುಪಿ: ಪ್ರತಿಯೊಬ್ಬ ಮನುಷ್ಯನ ಆಂತರ್ಯದಲ್ಲಿ ಪರಿಪೂರ್ಣತೆ ಇದೆ. ಆದರೆ ಅದು ಪ್ರಕಾಶಿಸಲು ನೈತಿಕ ಚೌಕಟ್ಟಿನ ಒಳಗೆ ಸರಿಯಾದ ಮಾರ್ಗದಲ್ಲಿ ಕ್ರಮಿಸಬೇಕು. ಯುವಜನತೆ ದೌರ್ಬಲ್ಯಗಳನ್ನು ತ್ಯಜಿಸಬೇಕು. ಒಳ್ಳೆಯ ಅರಿವು, ವಿವೇಚನೆಗಳ ಜೊತೆಗೆ ಬಲಶಾಲಿಗಳಾಗಬೇಕು ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ವೀರೇಶಾನಂದ ಸರಸ್ವತಿ ಕರೆ ನೀಡಿದರು.

ಎಂ.ಜಿ.ಎಂ. ಕಾಲೇಜಿನಲ್ಲಿ ವಿವೇಕಾನಂದ ಚಿಂತನ ವೇದಿಕೆ ಆಶ್ರಯದಲ್ಲಿ  "ಯುವಜನತೆಯ ಮುಂದಿರುವ ಸವಾಲುಗಳು; ಸರಿಯುತ್ತರ" ಎಂಬ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು. 
ಯುವಜನತೆ  ಯೌವ್ವನದ ಸವಾಲುಗಳಿಗೆ ಎದೆಗುಂದದೆ ಸಾಹಸ, ಧೈರ್ಯ,- ಶಕ್ತಿ,- ಶ್ರದ್ಧೆ ಹಾಗೂ ವಿಧೇಯತೆಗಳನ್ನು ಮೈಗೂಡಿಸಿಕೊಂಡು ಕರ್ತವ್ಯವನ್ನು ಪೂರೈಸಿದರೆ ವಿಶ್ವಕಲ್ಯಾಣ ಸಾಧ್ಯ. ಶಿಕ್ಷಣ, ಅಧ್ಯಯನಶೀಲತೆ ಹಾಗೂ ನಿತ್ಯವೂ ಹಿರಿಯರಿಗೆ ಗೌರವ ಸಲ್ಲಿಸುವ ಮೂಲಕ  ವಿವೇಕಿಗಳಾಗಬಹುದು. ಯುವಜನತೆ ಮುಖ್ಯವಾಗಿ ಸೋಲಿನ ಭಯವನ್ನು ಮತ್ತು ಟೀಕೆಗಳ ಭಯವನ್ನು ತೊಡೆಯಲು ಸಾಕ್ಷಿ ಪ್ರಜ್ಞೆಯ ಮೂಲಕ ಕರ್ತವ್ಯಶಿಲರಾಗಬೇಕು ಎಂದು ಹೇಳಿದರು. 
ಅಕಾಡೆಮಿ ಆಫ್​ ಜನರಲ್​ ಎಜುಕೇಶನ್​ ನ ಆಡಳಿತಾಧಿಕಾರಿ ಡಾ. ಕೆ. ಶ್ರೀಧರ ಪೈ ಅಧ್ಯಕ್ಷತೆ ವಹಿಸಿದ್ದರು. ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಉಪಪ್ರಾಂಶುಪಾಲ ಡಾ. ವಿಶ್ವನಾಥ ಪೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ನಾಯ್ಕ, ಪದವಿ ಪೂರ್ವ ಪ್ರಾಂಶುಪಾಲೆ ಪ್ರೊ. ಮಾಲತಿ ದೇವಿ ಉಪಸ್ಥಿತರಿದ್ದರು. ವಿವೇಕಾನಂದ ಚಿಂತನ ವೇದಿಕೆಯ ಸಂಚಾಲಕ ವಿನೀತ್​ ರಾವ್​ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು. ಸಂಧ್ಯಾ ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ಪ್ರಾರ್ಥಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net