ನಟ ಶ್ರೀಪಾದ ಹೆಗಡೆ ಹಾಗೂ ಕಲಾವಿದ ಡಾ. ರಾಘವ ನಂಬ್ಯಾರ್ ಅವರನ್ನು ಸನ್ಮಾನಿಸಲಾಯಿತು. ಕರ್ಣಾಟಕ ಬ್ಯಾಂಕ್ ಉಡುಪಿ ಪ್ರದೇಶಿಕ ಕಚೇರಿಯ ಅಧಿಕಾರಿ ಸುಬ್ರಹ್ಮಣ್ಯ ಶುಭಹಾರೈಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಎನ್. ಆರ್. ಬಲ್ಲಾಳ್, ಭಾಸ್ಕರ್ ರಾವ್, ಪ್ರಧಾನ ಕಾರ್ಯದರ್ಶಿ ಪ್ರದಿಪ್ ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು. ಪ್ರಭಾಕರ ಜಿ.ಪಿ. ತುಮರಿ ನಿರೂಪಿಸಿದರು. ವಿದ್ಯಾವಂತ ಆಚಾರ್ ಸ್ವಾಗತಿಸಿದರು. ಕಾರ್ತಿಕ್ ವಂದಿಸಿದರು. ರಂಗಭೂಮಿ ಕಲಾವಿದರಿಂದ 'ಸಂವೇದನೆ' ನಾಟಕ ಪ್ರದರ್ಶನಗೊಂಡಿತು.