ಪರಿಶ್ರಮವಿದ್ದರೆ ಗುರಿ ತಲುಪುವುದು ನಿಶ್ಚಿತ

 ವಿದ್ವತ್ ಕಾಲೇಜಿನಲ್ಲಿ ಸಾಧಕರನ್ನು ಗೌರವಿಸಲಾಯಿತು. ಸುಭಾಶ್ಚಂದ್ರ ಶೆಟ್ಟಿ, ರಂಗನಾಥ್ ಆರ್., ಪ್ರಜ್ವಲ್ ರೈ, ಎಂ.ಕೆ.ಕಾಶಿನಾಥ್, ಬಾಲಕೃಷ್ಣ ನಾಯ್ಕ, ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಿದ್ವತ್ ಕಾಲೇಜಿನಲ್ಲಿ ಸಾಧಕರನ್ನು ಗೌರವಿಸಲಾಯಿತು. ಸುಭಾಶ್ಚಂದ್ರ ಶೆಟ್ಟಿ, ರಂಗನಾಥ್ ಆರ್., ಪ್ರಜ್ವಲ್ ರೈ, ಎಂ.ಕೆ.ಕಾಶಿನಾಥ್, ಬಾಲಕೃಷ್ಣ ನಾಯ್ಕ, ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Published on
ಬೆಳ್ತಂಗಡಿ: ನಮ್ಮ ಸಾಧನೆಯೇ ಪರಿಶ್ರಮವಾಗಿ ಪರಿವರ್ತನೆಯಾದಾಗ ನಾವು ಅಂದುಕೊಂಡ ಯೋಜನೆ ಕಾರ್ಯಗತವಾಗಲು ಸಾಧ್ಯವಿದೆ. ಇದಕ್ಕೆ ಸಿಇಟಿ ಯಲ್ಲಿ ರಾಜ್ಯಕ್ಕೆ 7ನೇ ರ‌್ಯಾಂಕ್ ಪಡೆದ ಚಿನ್ಮಯ್ ಜಿ.ಕೆ. ಉದಾಹರಣೆ ಎಂದು ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೇಳಿದರು.
ಸಿಇಟಿಯಲ್ಲಿ ರಾಜ್ಯಕ್ಕೆ 7ನೇ ರ‌್ಯಾಂಕ್ ಪಡೆದ ವಿದ್ವತ್ ಪಿಯು ಕಾಲೇಜಿನ ಚಿನ್ಮಯ್ ಜಿ.ಕೆ. ಹಾಗೂ ಬೋರ್ಡ್, ಜೆಇಇ ಸೇರಿದಂತೆ ಇತರ ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಸನ್ಮಾನಿಸಿ ಮಾತನಾಡಿದರು.
ವಿದ್ವತ್ ಪಿ.ಯು.ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಗಂಗಾಧರ್ ಇ.ಎಂ. ಮಾತನಾಡಿ, ಸಾಧಕ ಮಕ್ಕಳು ಶೈಕ್ಷಣಿಕವಾಗಿ ಕಲ್ಲು ಬಂಡೆಯಂತೆ ಪರಿವರ್ತನೆಯಾದ ಫಲವಾಗಿ ಎಷ್ಟೇ ಕಷ್ಟಗಳು ಎದುರಾದರೂ ಅಂಕ ಗಳಿಸುವವರೆಗೆ ವಿರಮಿಸಿಲ್ಲ. ಶೈಕ್ಷಣಿಕವಾಗಿ ವಿದ್ವತ್ ಸದಸ್ಯರು ಒಂದು ಕುಟುಂಬದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಗಣಿತ ವಿಭಾಗ ಮುಖ್ಯಸ್ಥ ರಂಗನಾಥ್ ಆರ್., ವಿದ್ವತ್ ಪಿಯು ಕಾಲೇಜಿನ ಕಾರ್ಯದರ್ಶಿ ಪ್ರಜ್ವಲ್ ರೈ, ಖಜಾಂಚಿ ಎಂ.ಕೆ.ಕಾಶಿನಾಥ್, ಪ್ರಾಂಶುಪಾಲ ಬಾಲಕೃಷ್ಣ ನಾಯ್ಕ, ಆಡಳಿತ ಅಧಿಕಾರಿ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.
ಸಾಧಕ ವಿದ್ಯಾರ್ಥಿಗಳಾದ ಚಿನ್ಮಯ್ ಜಿ.ಕೆ., ಅವರಿಗೆ ಲ್ಯಾಪ್‌ಟಾಪ್ ನೀಡಿ ಸನ್ಮಾನಿಸಲಾಯಿತು. ಜತೆಗೆ ಜೆಇಇ ಸಾಧಕರಾದ ತನುಶ್ರೀ, ಸಂಪತ್ ಕುಮಾರ್ ಪುಟ್ಟಿ, ಮನೀಶ್ ಡಿ., ಪ್ರಥಮ್ ಆರ್.ಗೋಖಲೆ, ಪ್ರತೀಕ್ ವಿ.ಎಸ್. ಹಾಗೂ ಪಾಲಕರನ್ನು ಸನ್ಮಾನಿಸಲಾಯಿತು.
ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರತಾಪ್ ಬಾಬು ಡಿ.ಎಂ. ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ನೀಲಕಂಠ ನಿರೂಪಿಸಿದರು. ವಾಣಿಜ್ಯ ವಿಭಾಗ ಮುಖ್ಯಸ್ಥೆ ಮಹಿತಾ ಕುಮಾರಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಅನುಶ್ರೀ ಎನ್. ಸಾಧಕರನ್ನು ಪರಿಚಯಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಅಕ್ಷತಾ ಶೆಟ್ಟಿ, ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ಹೇಮಾವತಿ ಬಿ.ಎಂ., ವಿವಿಧ ವಿಭಾಗದ ಉಪನ್ಯಾಸಕರು ಕಾರ್ಯಕ್ರಮ ಸಂಯೋಜಿಸಿದರು.

ಎರಡು ವರ್ಷಗಳ ವಿದ್ವತ್ ಪಯಣ ಅತ್ಯಂತ ಸಂತಸ ತಂದಿದೆ. ಚಿನ್ಮಯ್‌ನಂತೆ ಸಾಧನೆ ವೇದಿಕೆಗೆ ಏರಲು ಎಲ್ಲರಿಗೂ ಅವಕಾಶವಿದೆ. ಆದರೆ ಸಮಯ ನೀಡಬೇಕು. ವಿದ್ವತ್ ಕಾಲೇಜು ಈ ಸಾಧನೆ ಮಾಡಲು ಶಿಕ್ಷಕರ ಪರಿಶ್ರಮ ಕಾರಣ.

— ಗಣೇಶ್ ಭಟ್, ಚಿನ್ಮಯ್ ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net