ಮಾನಸಿಕ ರೋಗಿಗಳ ಬಗ್ಗೆ ಬೇಡ ತಾತ್ಸಾರ

ಉಡುಪಿಯ ಜಿ.ಶಂಕರ್​ ಕಾಲೇಜ್​ನಲ್ಲಿ ಬೈಕರ್​ ಸೆಹರ್​ ಹಶ್ಮಿ ಮತ್ತು ತಂಡದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರೊ. ನಿಕೇತನಾ, ಡಾ. ಗಣನಾಥ್​ ಶೆಟ್ಟಿ ಎಕ್ಕಾರು, ಪ್ರೊ. ಶ್ರೀಮತಿ ಅಡಿಗ, ಪ್ರೊ. ಕೃಷ್ಣ ಭಟ್​, ಅಶ್ವಿಜಾ ಇತರರಿದ್ದರು.
ಉಡುಪಿಯ ಜಿ.ಶಂಕರ್​ ಕಾಲೇಜ್​ನಲ್ಲಿ ಬೈಕರ್​ ಸೆಹರ್​ ಹಶ್ಮಿ ಮತ್ತು ತಂಡದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರೊ. ನಿಕೇತನಾ, ಡಾ. ಗಣನಾಥ್​ ಶೆಟ್ಟಿ ಎಕ್ಕಾರು, ಪ್ರೊ. ಶ್ರೀಮತಿ ಅಡಿಗ, ಪ್ರೊ. ಕೃಷ್ಣ ಭಟ್​, ಅಶ್ವಿಜಾ ಇತರರಿದ್ದರು.
Published on

* ದೆಹಲಿಯ ಬೈಕರ್​ ಸೆಹರ್​ ಹಶ್ಮಿ ಕಿವಿಮಾತು

* ಉಡುಪಿಯಲ್ಲಿ ಆರೋಗ್ಯ ಜಾಗೃತಿ ಅಭಿಯಾನ

ಉಡುಪಿ: ಯಾಂತ್ರೀಕೃತ ಬದುಕಿನಲ್ಲಿ ಮುಳುಗಿಹೋಗುತ್ತಿರುವ ಈ ಕಾಲದಲ್ಲಿ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಖಿನ್ನತೆಗೆ ಒಳಗಾಗಿ ಅನೇಕ ಸಮಸ್ಯೆ ಅನುಭವಿಸುವಂತಾಗಿದೆ. ಈ ಕುರಿತು ಮುಕ್ತವಾಗಿ ಮಾತನಾಡುವ ಮೂಲಕ ಮಾನಸಿಕ ರೋಗಿ ಎಂಬ ಕಳಂಕ ದೂರಗೊಳಿಸಬೇಕು. ಅಗತ್ಯವಿದ್ದರೆ ವೃತ್ತಿಪರರ ನೆರವು ಪಡೆಯಬೇಕು ಎಂದು ದೇಶಾದ್ಯಂತ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ ಕೈಗೊಂಡಿರುವ ದೆಹಲಿಯ ಸೆಹರ್​ ಹಶ್ಮಿ ಕಿವಿಮಾತು ಹೇಳಿದರು.
ಉಡುಪಿಯ ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮಂಗಳವಾರ (ಸೆ.8) ಆಯೋಜಿಸಿದ್ದ ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಆರೋಗ್ಯದ ಕಾಳಜಿ ಅಗತ್ಯ

ಜಿಲ್ಲಾ ರೆಡ್​ಕ್ರಾಸ್​ ಘಟಕದ ಕಾರ್ಯದರ್ಶಿ ಡಾ. ಗಣನಾಥ್​ ಶೆಟ್ಟಿ ಎಕ್ಕಾರು ಮಾತನಾಡಿ, ಭಾರತದಲ್ಲಿ ಅನೇಕರು ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಎಷ್ಟೇ ತೊಂದರೆ ಆಗುತ್ತಿದ್ದರೂ ಮೌನ ವಹಿಸಿದ್ದಾರೆ. ದೈಹಿಕ, ಮಾನಸಿಕ ಹಾಗೂ ಸಾಂಸ್ಕೃತಿಕ ಆರೋಗ್ಯದ ಕಾಳಜಿ ವಹಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಭಟ್​, ರೇಂಜರ್​ ಲೀಡರ್​ ಅಶ್ವಿಜಾ, ಬೈಕ್​ ರ್ಯಾಲಿ ಅಭಿಯಾನ ತಂಡದ ಸದಸ್ಯರಾದ ಫರ್ಹತ್​ ಖಾನ್​, ಸನ್ನಿ ಲೋಚವ್​ ಮತ್ತು ರಾಕೇಶ್​ ಸೈನಿ ಉಪಸ್ಥಿತರಿದ್ದರು.
ಕಾಲೇಜ್​ನ ರೆಡ್​ ಕ್ರಾಸ್​ನ ಯೋಜನಾಧಿಕಾರಿ ಕವಿತಾ ಸ್ವಾಗತಿಸಿದರು. ಕಾಲೇಜ್​ನ ಮನ:ಶಾಸ್ತ್ರ ವಿಭಾಗದ ಮುಖ್ಯಸ್ಥೆ ರಮ್ಯಾ ವಿ. ಕಾರ್ಯಕ್ರಮ ನಿರೂಪಿಸಿದರು. 

ಬೈಕ್​ ರ್ಯಾಲಿ ಮೂಲಕ 100 ಕಾರ್ಯಾಗಾರ

ಮಾನಸಿಕ ಆರೋಗ್ಯ ಹದಗೆಟ್ಟರೆ ಜೀವನವೇ ಅಂತ್ಯವಾದಂತೆ. ನಾನೂ ಸಹ ಟ್ರೋಮಾ ಹಂತ ತಲುಪಿದ್ದೆ. ಹೀಗಾಗಿ ಎಲ್ಲರೂ ಮಾನಸಿಕವಾಗಿ ಆರೋಗ್ಯವಂತರಾಗಿ ಇರಬೇಕೆಂದು ಜಾಗೃತಿ ಮೂಡಿಸುತ್ತಿದ್ದೇನೆ. 'ದಿಗಂತದಾಚೆಗೆ: ಸ್ಥೈರ್ಯಕ್ಕಾಗಿ ಒಂದು ಸವಾರಿ' ಎಂಬ ಘೋಷಣೆಯೊಂದಿಗೆ ಬೈಕ್​ ರ್ಯಾಲಿ ಅಭಿಯಾನ ಕೈಗೊಂಡಿದ್ದೇನೆ. ಆ. 20ರಂದು ದೆಹಲಿಯಲ್ಲಿ ಹಿರಿಯ ಚಿತ್ರನಟಿ ಶರ್ಮಿಳಾ ಠಾಗೋರ್​ ಚಾಲನೆ ನೀಡಿದ್ದು, ದೆಹಲಿ&ಕನ್ಯಾಕುಮಾರಿ&ದೆಹಲಿ ಮಾರ್ಗದ 50 ನಗರಗಳಲ್ಲಿ ಮಾನಸಿಕ ಆರೋಗ್ಯದ ಕುರಿತು 100 ಕಾರ್ಯಾಗಾರ ನಡೆಸಲಿದ್ದೇನೆ ಎಂದು ಸೆಹರ್​ ಹಶ್ಮಿ ತಿಳಿಸಿದರು.
"

ವೈಯಕ್ತಿಕ ಅನುಭವಗಳ ಮೂಲಕ ಯುವಜನರನ್ನು ತಲುಪಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುತ್ತಿರುವ ಸೆಹರ್​ ಹಶ್ಮಿ ಮಾದರಿಯಾಗಿದ್ದಾರೆ. ತಂಡದೊಂದಿಗೆ ಬೈಕ್​ ರ್ಯಾಲಿ ಮೂಲಕ ದೇಶದ ಯುವಮನಸ್ಸುಗಳನ್ನು ತಲುಪುತ್ತಿರುವ ಅವರ ಕಾರ್ಯ ಶ್ಲಾಘನೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net