ವಿವಿಧ ವರ್ತನಾ ವ್ಯಸನಗಳ ಕುರಿತಾಗಿ ನಾಗರಾಜ್ ಮೂರ್ತಿ ಮಾತನಾಡಿ, ಮಾದಕ ದ್ರವ್ಯವಷ್ಟೇ ಅಲ್ಲದೆ ಕೆಲವು ವರ್ತನೆಗಳೂ ಸಹ ವ್ಯಸನಗಳಾಗುತ್ತವೆ. ಮೊಬೈಲ್ ಫೋನ್, ಸಾಮಾಜಿಕ ಜಾಲತಾಣ, ಆನ್ಲೈನ್ ಗೇಮಿಂಗ್, ಜೂಜಾಟ, ಶಾಪಿಂಗ್, ಅಶ್ಲೀಲ ವಿಡಿಯೋ ವೀಕ್ಷಣೆ, ಇಂಟರ್ನೆಟ್ ಬಳಕೆ ಇವುಗಳು ಮಿತಿ ಮೀರಿದಾಗ ವ್ಯಸನವಾಗುತ್ತದೆ. ಅವುಗಳಿಂದ ಓದು, ಕೆಲಸ, ಕುಟುಂಬ ಜೀವನದ ಮೇಲೂ ದುಷ್ಪರಿಣಾಮ ಉಂಟಾಗಬಹುದು ಎಂದರು.