ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸ್ಮರಣೆ

 ಕೊಂಡೇಲಾ ್ರೆಂಡ್ಸ್ ಧ್ವಜವಂದನೆ ಕಾರ್ಯಕ್ರಮದಲ್ಲಿ ಗುರುರಾಜ್ ಮಲ್ಲಿಗೆಯಂಗಡಿ ಮಾತನಾಡಿದರು. ಪ್ರಮುಖರಾದ ಶಶಿಕಲಾ, ಪದ್ಮಲತಾ ರಾವ್, ಲೋಕಯ್ಯ ಸಾಲ್ಯಾನ್ ಕೊಂಡೇಲ ಮೊದಲಾದವರಿದ್ದರು.
ಕೊಂಡೇಲಾ ್ರೆಂಡ್ಸ್ ಧ್ವಜವಂದನೆ ಕಾರ್ಯಕ್ರಮದಲ್ಲಿ ಗುರುರಾಜ್ ಮಲ್ಲಿಗೆಯಂಗಡಿ ಮಾತನಾಡಿದರು. ಪ್ರಮುಖರಾದ ಶಶಿಕಲಾ, ಪದ್ಮಲತಾ ರಾವ್, ಲೋಕಯ್ಯ ಸಾಲ್ಯಾನ್ ಕೊಂಡೇಲ ಮೊದಲಾದವರಿದ್ದರು.
Published on

ಕಿನ್ನಿಗೋಳಿ

: ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ನೆನಪು ಅಗತ್ಯವಾಗಿ ವಾಡಬೇಕು. ನಮ್ಮ ಧರ್ಮ ಸಂಸ್ಕೃತಿಯನ್ನು ಬಗ್ಗೆ ಚಿಂತನೆ ನಡೆಸಬೇಕು. ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸ ಆಗಬೇಕು ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಹೇಳಿದರು.

ಕೊಂಡೇಲಾ ್ರೆಂಡ್ಸ್ ವತಿಯಿಂದ ಕೊಂಡೇಲದಲ್ಲಿ ಸ್ವಾತಂತ್ರೋತ್ಸವದಲ್ಲಿ ಮಾತನಾಡಿದರು. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ ಸುಪರ್ ವೈಸರ್ ಶಶಿಕಲಾ ಧ್ವಜಾರೋಹಣಗೈದರು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ಗುರುರಾಜ್ ಮಲ್ಲಿಗೆಯಂಗಡಿ, ಪದ್ಮಲತಾ ರಾವ್, ಲೋಕಯ್ಯ ಸಾಲ್ಯಾನ್ ಕೊಂಡೇಲ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವೀಕ್ಷಿತ್, ಮೋಕ್ಷಿತ್, ಪ್ರಣಾಮ್, ಮನೀಶ್, ಜಯಲಕ್ಷ್ಮೀ ಜಗದೀಶ್ ಆಚಾರ್ಯ, ವೀಕ್ಷಾ ಜೆ.ಕಟೀಲು, ಸಮೀಕ್ಷಾ, ಶ್ರೇಯಾ ಶ್ಯಾಮರಾಯ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕರಾಟೆ ಶಿಕ್ಷಕ ಈಶ್ವರ್ ಕಟೀಲು, ಅಚ್ಯುತ್ತ ಸಾಲ್ಯಾನ್, ಸಂಸ್ಥೆಯ ಅಧ್ಯಕ್ಷ ಸತೀಶ್ ದೇವಾಡಿಗ ಮತ್ತಿತರರಿದ್ದರು. ಜಯರಾಮ್ ಕೊಂಡೇಲ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net