ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಮೊದಲ ಹಂತ ಮುಗಿದಿದ್ದು, ಜಿಲ್ಲೆಯ ಒಟ್ಟು 10,63,876 ಮತದಾರರ ಪೈಕಿ 10,00,545 ಮತದಾರರ ಗಣತಿ ನಮೂನೆಯನ್ನು ಡಿಜಿಟಲೈಸ್ ಮಾಡಲಾಗಿದೆ. ಉಳಿದಂತೆ ಎ.ಎಸ್.ಡಿ.ಡಿ. ಪಟ್ಟಿಯಲ್ಲಿರುವ ಮೃತಪಟ್ಟ 21,262, ಶಾಶ್ವತವಾಗಿ ಸ್ಥಳಾಂತರಗೊಂಡ 29,361, ಗೈರು ಹಾಜರಾದ 4,145, ದ್ವಿಪ್ರತಿಯಲ್ಲಿ ಕಾರ್ಡ್ ಪಡೆದುಕೊಂಡ 8374 ಹಾಗೂ ಇತರೆ 189 ಮಂದಿ ಮತದಾರರು ಸೇರಿದಂತೆ ಒಟ್ಟು 63,331 ಮತದಾರರು ಮತದಾರರ ಕರಡು ಪಟ್ಟಿಯಿಂದ ಹೊರಗುಳಿಯಲಿದ್ದಾರೆ ಎಂದರು.