ನವೆಂಬರ್​ನಲ್ಲಿ ಮುಜರಾಯಿ ದೇವಳದ ಅರ್ಚಕರ ಸಮಾವೇಶ

ಜಿಲ್ಲೆಯ ಮುಜರಾಯಿ ದೇವಾಲಯಗಳ ಅರ್ಚಕರ ಸಭೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್​ ಸದಸ್ಯ ವೆಂಕಟೇಶ್​ ಅಡಿಗ  ಮಾತನಾಡಿದರು.
ಜಿಲ್ಲೆಯ ಮುಜರಾಯಿ ದೇವಾಲಯಗಳ ಅರ್ಚಕರ ಸಭೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್​ ಸದಸ್ಯ ವೆಂಕಟೇಶ್​ ಅಡಿಗ ಮಾತನಾಡಿದರು.
Published on
ಉಡುಪಿ: ಜಿಲ್ಲೆಯಲ್ಲಿ 25 ಎ ಗ್ರೇಡ್​, 17 ಬಿ ಗ್ರೇಡ್​, 571 ಸಿ ಗ್ರೇಡ್​ ದೇವಸ್ಥಾನಗಳಿವೆ. ಆದರೆ ಸಿ ಗ್ರೇಡ್​ ದೇವಸ್ಥಾನಗಳ ಪರಿಸ್ಥಿತಿ ಶೋಚನೀಯವಾಗಿದ್ದು, ಈ ಬಗ್ಗೆ ಸರ್ಕಾರದ ಗಮನಸೆಳೆಯುವ ನಿಟ್ಟಿನಲ್ಲಿ ನವೆಂಬರ್​ನಲ್ಲಿ ಉಡುಪಿಯಲ್ಲಿ ಮುಜರಾಯಿ ಅರ್ಚಕರ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್​ ಸದಸ್ಯ ವೆಂಕಟೇಶ್​ ಅಡಿಗ ಹೇಳಿದರು.

ಕಡಿಯಾಳಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ಮುಜರಾಯಿ ದೇವಾಲಯಗಳ ಅರ್ಚಕರ ಸಭೆಯಲ್ಲಿ ಮಾತನಾಡಿದರು.

ತಸ್ತೀಕ್​ ಹಣ ಅರ್ಚಕರಿಗೆ ಸೇರಬೇಕಾಗಿದ್ದು, 2&3 ಮಂದಿ ಅರ್ಚಕ ವರ್ಗವಿದ್ದಾಗ ದೇವಸ್ಥಾನದ ಖಾತೆ ಜಮೆಯಾಗುತ್ತದೆ. ಐಡಿ ಕಾರ್ಡ್​ ಹೊಂದಿರುವ ಅರ್ಚಕರಿಗೆ ರಾಜ್ಯಾದ್ಯಂತ ಎ ಗ್ರೇಡ್​ ದೇವಸ್ಥಾನಗಳಲ್ಲಿ ನೇರ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಹಾಗೂ ದೇವಾಲಯಗಳಲ್ಲಿ ಅರ್ಚಕರಿಗೆ ಇತರರಿಂದ ಆಗುತ್ತಿರುವ ಕಿರುಕುಳಗಳ ತಡೆಯಲು ಕಾಯ್ದೆ ಜಾರಿ ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಸರ್ಕಾರ ದೇವಸ್ಥಾನದ ಹೆಸರಿನಲ್ಲಿ ಜಾಗಗಳನ್ನು ನೋಂದಣಿ ಮಾಡುತ್ತಿದ್ದು, ಕೂಡಲೇ ಈ ಬಗ್ಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ದೇವಸ್ಥಾನಕ್ಕೆ ಸಂಬಂಧಪಟ್ಟ ಕೇಸ್​ಗಳಿದ್ದರೆ ದಾಖಲೆಗಳನ್ನು ದತ್ತಿ ಇಲಾಖೆಗೆ ನೀಡುವಂತೆ ತಿಳಿಸಿದರು. ಧಾರ್ಮಿಕ ಪರಿಷತ್​ ಜಿಲ್ಲಾ ಸದಸ್ಯ ಶ್ರೀಶ ಉಪಾಧ್ಯ, ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಪ್ರಸನ್ನ ತುಂಗ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net