ಉಡುಪಿಯ ಇಂದ್ರಾಳಿ ಶಾಲೆಯಲ್ಲಿ ನಡೆದ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ದಿನೇಶ್ ಹೆಗ್ಡೆ ಆತ್ರಾಡಿ ಅವರನ್ನು ಸನ್ಮಾನಿಸಲಾಯಿತು. ಕೆ.ಅಣ್ಣಪ್ಪ ಶೆಣೈ, ಕೆ.ವಿನಾಯಕ್ ಕಿಣಿ, ರೇಶ್ಮಾ ಪ್ರಭು, ವೈಷ್ಣವಿ ಕಾಮತ್, ಶಶಿರಾಜ್ ಕುಂದರ್, ಸಂತೋಷ್ ಸಗ್ರಿ, ವಿದ್ಯಾ ಅಮರ್ ಪೈ ಇತರರಿದ್ದರು.
Published on:
Copied
Follow Us
* ಪಾಲಕರಿಗೆ ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಕಿವಿಮಾತು
* ಇಂದ್ರಾಳಿ ಶಾಲೆಯಲ್ಲಿ ಶಿಕ್ಷಕ-ರಕ್ಷಕ -ಸಂಘದ ಮಾಹಾಸಭೆ
ಉಡುಪಿ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಅತ್ಯಂತ ಮಹತ್ವ. ಪರೀಕ್ಷಾ ಫಲಿತಾಂಶದಲ್ಲಿ, ಕ್ರೀಡೆ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಸಾಧನೆಗಾಗಿ ತಾವು ನೀಡುವ ತರಬೇತಿ ಶ್ಲಾಘನೀಯ. ಅದರೊಟ್ಟಿಗೆ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ತಂದೆ-ತಾಯಿಗಳು ಗುರು-ಹಿರಿಯರನ್ನು ಗೌರವಿಸುವ ಹಾಗೂ ಮೌಲ್ಯಗಳ ಅರಿವು ಮೂಡಿಸುವ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಿದೆ ಎಂದು ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಕಿವಿಮಾತು ಹೇಳಿದರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಸಮೂಹ ಸಂಸ್ಥೆಯಲ್ಲಿ ಆಯೋಜಿಸಿದ್ದ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿರಂತರ 8 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿದ್ದ ದಿನೇಶ್ ಹೆಗ್ಡೆ ಆತ್ರಾಡಿ ಅವರನ್ನು ಸನ್ಮಾನಿಸಲಾಯಿತು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ವಿನಾಯಕ್ ಕಿಣಿ ಮತ್ತು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು ಶಾಲಾ ವರದಿ ವಾಚಿಸಿದರು. ಕೋಶಾಧಿಕಾರಿ ವೈಷ್ಣವಿ ಕಾಮತ್ 2025-26ನೇ ಸಾಲಿನ ಲೆಕ್ಕಪತ್ರ ವಾಚಿಸಿದರು.
ಸಭೆಯಲ್ಲಿ ಸಂಘದ 2026-28ನೇ ಸಾಲಿ ಪದಾಧಿಕಾರಿಗಳ ಆಯ್ಕೆ ನಡೆದು ಅಧ್ಯಕ್ಷರಾಗಿ ಶಶಿರಾಜ್ ಕುಂದರ್, ಉಪಾಧ್ಯಕ್ಷರಾಗಿ ಸಂತೋಷ್ ಸಗ್ರಿ ನೇಮಕಗೊಂಡರು. ಆಡಳಿತ ಮಂಡಳಿಯ ಸದಸ್ಯೆ ವಿದ್ಯಾ ಅಮರ್ ಪೈ ಉಪಸ್ಥಿತರಿದ್ದರು.
ಸಂಘದ ಪದಾಧಿಕಾರಿಗಳು, ಶಿಕ್ಷಕ ವೃಂದ, ಪಾಲಕರು ಪಾಲ್ಗೊಂಡಿದ್ದರು. ಶಿಕ್ಷಕಿಯರಾದ ದೀಪಿಕಾ ಭಟ್, ಪ್ರತಿಭಾ ಎನ್.ಬಿ., ಅಕ್ಷಯಾ ಭಟ್ ಪ್ರಾರ್ಥಿಸಿದರು. ಸಹ ಶಿಕ್ಷಕಿ ಚೈತ್ರಾ ವಿಜಯ್ ಸ್ವಾಗತಿಸಿದರು. ದೀಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾ ಎಸ್.ಜಿ. ವಂದಿಸಿದರು.