ಸಿಎನ್​ಜಿ ಸಮಸ್ಯೆ ಕೂಡಲೇ ಪರಿಹರಿಸಿ

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಿಎನ್​ಜಿ ಸಮಸ್ಯೆ ಕುರಿತ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಕೋಟ ಶ್ರೀನಿವಾಸ ಪೂಜಾರಿ, ಎ. ಕಿರಣಕುಮಾರ್​ ಕೊಡ್ಗಿ ಇತರರಿದ್ದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಿಎನ್​ಜಿ ಸಮಸ್ಯೆ ಕುರಿತ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಕೋಟ ಶ್ರೀನಿವಾಸ ಪೂಜಾರಿ, ಎ. ಕಿರಣಕುಮಾರ್​ ಕೊಡ್ಗಿ ಇತರರಿದ್ದರು.
Published on

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ

* ಡಿಸಿ ಕಚೇರಿಯಲ್ಲಿ ಕಂಪನಿಯವರೊಂದಿಗೆ ಸಭೆ

ಉಡುಪಿ: ಜಿಲ್ಲೆಯಲ್ಲಿ ಸಿಎನ್​ಜಿ ಕಾರು ಹಾಗೂ ಆಟೋ ಹೊಂದಿರುವ ಗ್ರಾಹಕರಿಗೆ ಗ್ಯಾಸ್​ ವಿತರಣಾ ಕೇಂದ್ರಗಳಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿದೆ. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಿ ಸರಳವಾಗಿ ಗ್ಯಾಸ್​ ಲಭ್ಯವಾಗುವಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಜ.30) ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯಲ್ಲಿ ಸಿಎನ್​ಜಿ ಸರಬರಾಜಿನಲ್ಲಿ ಉಂಟಾಗುತ್ತಿರುವ ಸಮಸ್ಯೆ ಕುರಿತು ಚರ್ಚಿಸಿದರು.

ಜಿಲ್ಲೆಯಲ್ಲಿ ಸಿಎನ್​ಜಿ ಗ್ರಾಹಕರ ಹೆಚ್ಚಳ

ಜಿಲ್ಲೆಯಲ್ಲಿ ಸಿಎನ್​ಜಿ ಬಳಸುವ ವಾಹನಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಗ್ಯಾಸ್​ ವಿತರಣೆಗೆ ಅಗತ್ಯವಿರುವ ಎಲ್ಲ ರೀತಿಯ ಕ್ರಮ ಕೈಗೊಂಡು ಬೇಡಿಕೆಗೆ ಅನುಗುಣವಾಗಿ ಪೂರೈಸಬೇಕು ಆಟೋ ಚಾಲಕರು ಸೇರಿದಂತೆ ಇನ್ನಿತರ ವಾಹನಗಳಿಗೆ ಗ್ಯಾಸ್​ ತುಂಬಿಸಲು ಪಂಪ್​ಗಳ ಮುಂದೆ 2-3 ಗಂಟೆಗಿಂತ ಹೆಚ್ಚು ಕಾಲ ಕಾಯುವ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಗೈಲ್​ ಗ್ಯಾಸ್​ ಕಂಪನಿ ಹಾಗೂ ಅದಾನಿ ಕಂಪನಿಯವರು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಡಿಸಿ ಸ್ವರೂಪಾ ತಿಳಿಸಿದರು.

ಟ್ಯಾಂಕರ್​ ಸಂಖ್ಯೆ ಹೆಚ್ಚಿಸಿ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಸಿಎನ್​ಜಿ ಸಕಾಲಕ್ಕೆ ಲಭ್ಯವಾಗದೆ ಕೆಲವರ ವೃತ್ತಿ ಜೀವನಕ್ಕೂ ತೊಂದರೆ ಉಂಟಾಗುತ್ತಿದೆ. ಕಳೆದ ಸಭೆಯಲ್ಲಿ ಅದಾನಿ ಕಂಪನಿಯವರು ತಮ್ಮದೇ ಸ್ವಂತ ಗ್ಯಾಸ್​ ತುಂಬುವ ಡಿಪೋ ಶೀಘ್ರವೇ ಪ್ರಾರಂಭಿಸುವುದಾಗಿ ತಿಳಿಸಿದ್ದರು. ಆದರೆ, ಇನ್ನೂ ಆಗಿಲ್ಲ. ಮಂಗಳೂರಿನಿಂದ ಪ್ರಸ್ತುತ 17 ಟ್ಯಾಂಕರ್​ ಮೂಲಕ ಸಿಎನ್​ ತರಲಾಗುತ್ತಿದೆ. ಈ ವಾಹನಗಳ ಸಂಖ್ಯೆ ಮತ್ತಷ್ಟು ಹೆಚ್ಚಿಸಿದ್ದಲ್ಲಿ ಸಮರ್ಪಕವಾಗಿ ಗ್ಯಾಸ್​ ಸರಬರಾಜು ಮಾಡಬಹುದು ಎಂದರು. ಇದಕ್ಕೆ ಅದಾನಿ ಕಂಪನಿಯವರು ಮೊದಲು ಆದ್ಯತೆ ನೀಡಬೇಕು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಅನೇಕ ಚಾಲಕರು ಸಿಎನ್​ಜಿ ವಿತರಣಾ ಘಟಕಗಳಲ್ಲಿ ಗ್ಯಾಸ್​ ತುಂಬಿಸಲು ಆಗುತ್ತಿರುವ ಸಮಸ್ಯೆ ಕುರಿತು ಗಮನಕ್ಕೆ ತಂದರು. ಸಭೆಯಲ್ಲಿ ಕುಂದಾಪುರ ಶಾಸಕ ಎ.ಕಿರಣಕುಮಾರ್​ ಕೊಡ್ಗಿ, ಗೈಲ್​ ಗ್ಯಾಸ್​ ಹಾಗೂ ಅದಾನಿ ಗ್ಯಾಸ್​ ಕಂಪನಿಯ ಮುಖ್ಯಸ್ಥರು, ಆಟೋ ಚಾಲಕರು ಉಪಸ್ಥಿತರಿದ್ದರು.
"

ಮಂಗಳೂರಿನ ಗ್ಯಾಸ್​ ಡಿಪೋದಲ್ಲಿ ಟ್ಯಾಂಕರ್​ಗಳಿಗೆ ಗ್ಯಾಸ್​ ತುಂಬಿಸುವಾಗ ಉಡುಪಿ ಜಿಲ್ಲೆಯ ವಾಹನಗಳಿಗೆ ಸರದಿ ಸಾಲಿನ ಪ್ರಕಾರ ಗ್ಯಾಸ್​ ತುಂಬಿಸಲು ಅದಾನಿ ಕಂಪನಿಯವರು ಆದ್ಯತೆ ನೀಡಬೇಕು. ಸಾಧ್ಯವಾದಲ್ಲಿ ನಿಗದಿತ ವೇಳೆ ನೀಡಿ ಗ್ಯಾಸ್​ ಟ್ಯಾಂಕರ್​ಗಳಿಗೆ ಭರ್ತಿ ಮಾಡಲು ಅವಕಾಶ ಮಾಡಿಕೊಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net