ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘಟನೆ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಮ್ಮುಂಜೆ ರಮೇಶ್ ನಾಯಕ್, ಕಾರ್ಯದರ್ಶಿ ಯು.ಸುಬ್ರಮಣ್ಯ ರಾವ್, ಕೋಶಾಧಿಕಾರಿ ಗುರುಕೃಪ ವಿ. ರಾವ್, ಶರಣಂ ಶೆಟ್ಟಿ, ವಿನೋದ್ ನಾಯಕ್, ರವೀಂದ್ರ ಕಾಮತ್, ಅಜಿತ್ ಮೆಂಡನ್, ಅಶೋಕ್ ಶೆಟ್ಟಿ, ಸತೀಶ್, ವಿನಯ್ ಮೊದಲಾದವರು ಉಪಸ್ಥಿತರಿದ್ದರು.