ಅಂಗಾಂಗ ದಾನ ಜಾಗೃತಿಗಾಗಿ ವೈದ್ಯಕೀಯ ಕಾರ್ಯಾಗಾರ

ಉಡುಪಿ ಮಣಿಪಾಲದ ಕೆಎಂಸಿಯಲ್ಲಿ ಅಂಗಾಂಗ ದಾನ ಜಾಗೃತಿಗಾಗಿ ವೈದ್ಯಕೀಯ ಶಿಕ್ಷಣ ತರಬೇತಿ ಕಾರ್ಯಾಗಾರ ನಡೆಯಿತು. ಅವ್ನಿಶ್​ ಸೇಠ್​, ಪಲ್ಲವಿ ಕುಮಾರ್​, ಎಂ.ಡಿ. ವೆಂಕಟೇಶ್​, ಡಾ. ಅನಿಲ್​ ಕೆ. ಭಟ್​, ಡಾ. ಸುಧಾಕರ್​ ಕಂಟಿಪುಡಿ, ಡಾ. ಅವಿನಾಶ್​ ಶೆಟ್ಟಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಉಡುಪಿ ಮಣಿಪಾಲದ ಕೆಎಂಸಿಯಲ್ಲಿ ಅಂಗಾಂಗ ದಾನ ಜಾಗೃತಿಗಾಗಿ ವೈದ್ಯಕೀಯ ಶಿಕ್ಷಣ ತರಬೇತಿ ಕಾರ್ಯಾಗಾರ ನಡೆಯಿತು. ಅವ್ನಿಶ್​ ಸೇಠ್​, ಪಲ್ಲವಿ ಕುಮಾರ್​, ಎಂ.ಡಿ. ವೆಂಕಟೇಶ್​, ಡಾ. ಅನಿಲ್​ ಕೆ. ಭಟ್​, ಡಾ. ಸುಧಾಕರ್​ ಕಂಟಿಪುಡಿ, ಡಾ. ಅವಿನಾಶ್​ ಶೆಟ್ಟಿ ಹಾಗೂ ವಿದ್ಯಾರ್ಥಿಗಳು ಇದ್ದರು.
Published on

* ಮಣಿಪಾಲದ ಕೆಎಂಸಿಯಲ್ಲಿ 2 ದಿನ ಕಾರ್ಯಕ್ರಮ 

ಉಡುಪಿ: ಮಣಿಪಾಲದಲ್ಲಿ ಕಸ್ತೂರ್ಬಾ ವೈದ್ಯಕಿಯ ಕಾಲೇಜ್​ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಕ್ರಿಟಿಕಲ್​ ಕೇರ್​ ಮತ್ತು ಪ್ಯಾಲಿಯೇಟಿವ್​ ಮೆಡಿಸಿನ್​ ವಿಭಾಗದ ವತಿಯಿಂದ ಅಂಗಾಂಗ ದಾನ ಜಾಗೃತಿ ಕುರಿತು ಎರಡು ದಿನಗಳ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮ ನಡೆಯಿತು.
ಮೆದುಳಿನ ಮರಣದ ನಂತರ (ಡಿಬಿಡಿ) ಮತ್ತು ರಕ್ತ ಪರಿಚಲನೆಯ ಮರಣದ ನಂತರ (ಡಿಸಿಡಿ) ಅಂಗಾಂಗ ದಾನದ ಅರಿವು ಮತ್ತು ತಿಳಿವಳಿಕೆ ಸುಧಾರಿಸಲು ಆರೋಗ್ಯ ವೃತ್ತಿಪರರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ತರಬೇತಿಯ ಮೊದಲ ದಿನ 150 ನರ್ಸಿಂಗ್​ ಸಿಬ್ಬಂದಿ, ಎರಡನೇ ದಿನ 250 ಎಂಬಿಬಿಎಸ್​ ವಿದ್ಯಾರ್ಥಿಗಳು ಮತ್ತು ಎಲ್ಲ  ವೈದ್ಯಕೀಯ ಹಾಗೂ ಶಸ್ತ್ರ ಚಿಕಿತ್ಸಾ ವಿಭಾಗದಿಂದ 100ಕ್ಕೂ ಹೆಚ್ಚು ಅಧ್ಯಾಪಕರು ಭಾಗವಹಿಸಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಣಿಪಾಲ ಅಂಗಾಂಗ ಹಂಚಿಕೆ ಮತ್ತು ಕಸಿ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಡಾ.(ಕರ್ನಲ್) ಅವ್ನಿಶ್​ ಸೇಠ್​ (ವಿಎಸ್​ಎಂ) ಮತ್ತು ಮೋಹನ್​ ಫೌಂಡೇಷನ್​ನ ಕಾರ್ಯನಿರ್ವಾಹಕ ನಿರ್ದೇಶಕಿ (ಎನ್​ಸಿಆರ್​) ಪಲ್ಲವಿ ಕುಮಾರ್​, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಷನ್​ನ ಉಪಕುಲಪತಿ ಲೆ.ಜನರಲ್​ (ಡಾ.) ಎಂ.ಡಿ. ವೆಂಕಟೇಶ್​ ಉಪಸ್ಥಿತರಿದ್ದರು. 
ಆರೋಗ್ಯ ವಿಜ್ಞಾನಗಳ ಸಹ ಉಪ ಕುಲಪತಿ ಡಾ. ಶರತ್​ ಕುಮಾರ್​ ರಾವ್​ ಬೆಂಬಲ ನೀಡಿದರು. ವೈದ್ಯಕೀಯ ಕಾಲೇಜಿನ ಡೀನ್​ ಡಾ. ಅನಿಲ್​ ಕೆ. ಭಟ್​, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಧಾಕರ್​ ಕಂಟಿಪುಡಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ ಪಾಲ್ಗೊಂಡಿದ್ದರು.

270 ಜನರಿಂದ ಪ್ರತಿಜ್ಞೆ

ತರಬೇತಿ ಕಾರ್ಯಕ್ರಮದಲ್ಲಿ ತಜ್ಞರಿಂದ ಸಂವಾದ, ಅಂಗಾಂಗ ದಾನದ ವೈದ್ಯಕೀಯ, ನೈತಿಕ ಮತ್ತು ಪ್ರಾಯೋಗಿಕ ಅಂಶಗಳ ಮಾಹಿತಿ ನೀಡಲಾಯಿತು. ಸುಮಾರು 270 ಜನರು ಅಂಗಾಂಗ ದಾನ ಬೆಂಬಲಿಸಲು ಮತ್ತು ಜಾಗೃತಿ ಮೂಡಿಸಲು ಪ್ರತಿಜ್ಞೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net