ಶಿಜು ವಟ್ಟಕಾಟ್ ಚಾರಿಟಿ ತಂಡ ಹಾಗೂ ಅನಶ್ವರ ಯುವಕ ಮಂಡಲ ಮುದೂರು ಜಂಟಿ ಆಶ್ರಯದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ವೈದ್ಯಕೀಯ ಸಹಾಯ ವಿತರಣೆ ಕಾರ್ಯಕ್ರಮ ಅನಶ್ವರ ಯುವಕ ಮಂಡಲದ ವಠಾರದಲ್ಲಿ ಜರುಗಿತು.
ಕುಂದಾಪುರ: ಶಿಜು ವಟ್ಟಕಾಟ್ ಚಾರಿಟಿ ತಂಡ ಹಾಗೂ ಮುದೂರು ಅನಶ್ವರ ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವೈದ್ಯಕೀಯ ಸಲಕರಣೆ ವಿತರಣೆ ಕಾರ್ಯಕ್ರಮ ಅನಶ್ವರ ಯುವಕ ಮಂಡಲದ ವಠಾರದಲ್ಲಿ ಭಾನುವಾರ ಜರುಗಿತು.
ಶಿಜು ವಟ್ಟಕಾಟ್ ಚಾರಿಟಿ ತಂಡದ ವತಿಯಿಂದ ರಕ್ತದೊತ್ತಡ ಮಾಪಕ ಯಂತ್ರಗಳು ಮತ್ತು ಮಧುಮೇಹ ಪರೀಕ್ಷಾ ಯಂತ್ರಗಳು ಸೇರಿದಂತೆ ಹಲವು ಅಗತ್ಯ ವೈದ್ಯಕೀಯ ಉಪಕರಣಗಳನ್ನು ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಯಿತು. ವೈದ್ಯಕೀಯ ಸೌಲಭ್ಯ ಅಗತ್ಯವಿರುವ ಕುಟುಂಬಗಳಿಗೆ ನೆರವು ಹಸ್ತಾಂತರಿಸಲಾಯಿತು.
ಶಿಜು ವಟ್ಟಕಾಟ್ ಚಾರಿಟಿ ತಂಡದ ಮುಖ್ಯಸ್ಥ ಶಿಜು ವಟ್ಟಕಾಟ್, ಅನಶ್ವರ ಯುವಕ ಮಂಡಲ ಅಧ್ಯಕ್ಷ ಜಿನೀಶ್, ಸಂತೋಷ್, ಸಫೀನ್, ಸೋಜೀಶ್ ಮೊದಲಾದವರು ಉಪಸ್ಥಿತರಿದ್ದರು.