ಶಿಕ್ಷಕನಲ್ಲಿರಲಿ ವಿಸ್ತಾರ ಜ್ಞಾನದ ಹರವು

 ಎಐ ತರಬೇತಿ ಕಾರ್ಯಾಗಾರವನ್ನು ಸಾಂಸ್ಕೃತಿಕ ಚಿಂತಕ ಇಬ್ರಾಹಿಂ ಸಾಹೇಬ್ ಉದ್ಘಾಟಿಸಿದರು. ಪ್ರಮುಖರಾದ ಮನೋಜ್ ಕಡಬ, ವೀಣಾ ಸುರೇಶ್, ನರೇಂದ್ರ ಕುಮಾರ್ ಕೋಟ ಇದ್ದರು.
ಎಐ ತರಬೇತಿ ಕಾರ್ಯಾಗಾರವನ್ನು ಸಾಂಸ್ಕೃತಿಕ ಚಿಂತಕ ಇಬ್ರಾಹಿಂ ಸಾಹೇಬ್ ಉದ್ಘಾಟಿಸಿದರು. ಪ್ರಮುಖರಾದ ಮನೋಜ್ ಕಡಬ, ವೀಣಾ ಸುರೇಶ್, ನರೇಂದ್ರ ಕುಮಾರ್ ಕೋಟ ಇದ್ದರು.
Published on
ಕೋಟ: ಜ್ಞಾನಕ್ಕೆ ಕೊನೆಯೆಂಬುದಿಲ್ಲ. ಶಿಕ್ಷಕರಾದವರು ಜ್ಞಾನದ ಹರವುಗಳನ್ನು ಸದಾ ವಿಸ್ತರಿಸಿಕೊಳ್ಳಬೇಕು. ಆ ದಿಸೆಯಲ್ಲಿ ನಾವೀನ್ಯ ರೂಪದ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ಈ ದೃಷ್ಟಿಯಿಂದ ಎಐ ಇಂದಿನ ಬಹು ಚರ್ಚೆಯ ವಿಷಯವಾಗಿದ್ದು, ಇದರ ಅರಿವು ಎಲ್ಲರಿಗೂ ಅಗತ್ಯ ಎಂದು ಸಾಂಸ್ಕೃತಿಕ ಚಿಂತಕ ಇಬ್ರಾಹಿಂ ಸಾಹೇಬ್ ಹೇಳಿದರು.
ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ನೆನಪು ಮೂವೀಸ್ ಮತ್ತು ಉಸಿರು ಕೋಟ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಎಐ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ತರಬೇತುದಾರ ಮನೋಜ್ ಕಡಬ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ವೀಣಾ ಸುರೇಶ್, ಎಐ ಕೃತಕ ಬುದ್ಧಿಮತ್ತೆಯ ಆಳ, ಅಗತ್ಯ, ಅದನ್ನು ಅರಿಯುವ ವಿಚಾರ ಮತ್ತು ಅದರಲ್ಲಿರುವ ಹೊಸ ಸಾಧ್ಯತೆಗಳ ಬಗ್ಗೆ ತರಬೇತಿ ನೀಡಿದರು.
ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net