ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ

 ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ 3ನೇ ರ‌್ಯಾಂಕ್ ಪಡೆದ ಸಮೀಕ್ಷಾ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ರಾಜೇಶ್ ನಾಯಕ್, ಪ್ರಕಾಶ್ ಜೋಗಿ, ವಿಜಯ ಕುಮಾರ್ ಶೆಟ್ಟಿ, ನಾಗರಾಜ್, ನಿಶಾ, ಚಂದ್ರಹಾಸ್ ಇದ್ದರು.
ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ 3ನೇ ರ‌್ಯಾಂಕ್ ಪಡೆದ ಸಮೀಕ್ಷಾ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ರಾಜೇಶ್ ನಾಯಕ್, ಪ್ರಕಾಶ್ ಜೋಗಿ, ವಿಜಯ ಕುಮಾರ್ ಶೆಟ್ಟಿ, ನಾಗರಾಜ್, ನಿಶಾ, ಚಂದ್ರಹಾಸ್ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಎಸ್‌ಎಸ್‌ಎಲ್‌ಸಿಯಲ್ಲಿ ಶೇ.50 ಫಲಿತಾಂಶ ಹೊಂದಿದ್ದ ವಿದ್ಯಾರ್ಥಿಗಳು ಇಂದು ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿದ್ದು, ನೋಡಿ ಆನಂದವಾಗಿದೆ. ಸಮೀಕ್ಷಾ 597 ಅಂಕ ಪಡೆಯುವುದರೊಂದಿಗೆ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹೆಬ್ರಿ ಅಮೃತ ಭಾರತಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್ ಹೇಳಿದರು.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ 3ನೇ ರ‌್ಯಾಂಕ್ ಪಡೆದ ಸಮೀಕ್ಷಾ ಅವರಿಗೆ ಗುರುವಾರ ಗೌರವ ಸಲ್ಲಿಸಿ ಮಾತನಾಡಿದರು.
ಪ್ರಾಂಶುಪಾಲ ಪ್ರಕಾಶ್ ಜೋಗಿ ಮಾತನಾಡಿ, ಸಂಸ್ಥೆಯ 130 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ 100 ಅಂಕ ಬಂದಿದೆ. ಕಾಲೇಜಿನಲ್ಲಿ ನಾವು ಮಾಡಿದ ವಿವಿಧ ರೀತಿಯ ತರಗತಿಗಳು ವಿದ್ಯಾರ್ಥಿಗಳಿಗೆ ಮುಟ್ಟಿದೆ. ಅನೇಕ ಪ್ರಿಪರೇಟರಿಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಉತ್ತಮ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದರು.
ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಹತ್ತನೇ ರ‌್ಯಾಂಕ್ ಪಡೆದ ಅನುಷಾ ನಾಯಕ್ ಹಾಗೂ ನಿಹಾನ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಕಾಲೇಜು ವತಿಯಿಂದ ಗೌರವ ಸಲ್ಲಿಸಲಾಯಿತು. ಪಿಆರ್‌ಒ ವಿಜಯ ಕುಮಾರ್ ಶೆಟ್ಟಿ, ಉಪನ್ಯಾಸಕರಾದ ನಾಗರಾಜ್, ನಿಶಾ, ಚಂದ್ರಹಾಸ್, ನಿಲಯ ಪಾಲಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net