ಸಾಹಿತ್ಯ ಕ್ಷೇತ್ರ ಯುವಕರಿಗೆ ದಾರಿದೀಪವಾಗಲಿ

 ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿವೃತ್ತ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಉದ್ಘಾಟಿಸಿದರು. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಜಯಸೂರ್ಯ ರೈ ಮಾದೋಡಿ, ತಹಸೀಲ್ದಾರ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿವೃತ್ತ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಉದ್ಘಾಟಿಸಿದರು. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಜಯಸೂರ್ಯ ರೈ ಮಾದೋಡಿ, ತಹಸೀಲ್ದಾರ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕಡಬ

ದಾರಿತಪ್ಪುವ ಹಾಗೂ ಕಾನೂನುಗಳನ್ನು ಉಲ್ಲಂಘಿಸುವ ಮೂಲಕ ಸಂಬಂಧಗಳನ್ನು ವಿಘಟಿತಗೊಳಿಸುವ ಯುವಸಮೂಹಕ್ಕೆ ಸರಿಯಾದ ದಾರಿಯನ್ನು ಹುಡುಕಿಕೊಡುವ ಕೆಲಸ ಕನ್ನಡ ಸಾಹಿತ್ಯ ಕ್ಷೇತ್ರ ಮಾಡಬೇಕಾಗಿದೆ. ಹಿಂದೆ ಕೌಶಲ ನಿರ್ಮಾಣದ ಅಗತ್ಯವಿತ್ತು. ಆದರೆ ಇಂದು ಯುವ ಸಮೂಹದ ಮನಸ್ಸು-ಹೃದಯಕ್ಕೆ ಮಾರ್ಗದರ್ಶನದ ಅಗತ್ಯತೆ ಇದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಹೇಳಿದರು.
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯವೇ ಎಲ್ಲ ಮೌಲ್ಯಗಳ ತಾಯಿ. ಸಮಾಜದಲ್ಲಿ ಮೌಲ್ಯ ಪ್ರತಿಪಾದನೆಗೆ ಆದ್ಯತೆ ಹೆಚ್ಚಾಗಬೇಕು. ಸಾಹಿತ್ಯ ವೇದಿಕೆಗಳು ಮೌಲ್ಯ ಪ್ರತಿಪಾದನೆ ಮಾಡದಿದ್ದರೆ ಯುವಜನತೆಯ ಕುಸಿತವೂ ಅಲ್ಲಿಯೇ ಪ್ರಾರಂಭವಾಗುತ್ತದೆ. ಮೌಲ್ಯದ ಮೂಲಕ ಯುವ ಜನಾಂಗವನ್ನು ಸಂವೇದನಾಶೀಲರನ್ನಾಗಿಸುವ ಕೆಲಸಕ್ಕೆ ಒತ್ತು ನೀಡಲೇಬೇಕಾದ ಸ್ಥಿತಿ ಇಂದು ನಿರ್ಮಾಣವಾಗಿದೆ. ಕನ್ನಡ ಸಾಹಿತ್ಯ ಯಾವತ್ತೂ ಜನಪರ ಮತ್ತು ಜೀವಪರವಾದ ಕ್ಷೇತ್ರವಾಗಿದೆ ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಇಂದಿಗೂ ಕನ್ನಡದ ಸಾಹಿತ್ಯದ ಮೌಲ್ಯ ಕ್ಷೀಣಿಸಿಲ್ಲ. ಅಸ್ವಾದಿಸುವ ಮನಸ್ಸು ಕಡಿಮೆಯಾಗಿದೆ. ಸಮಾಜ ಸುಧಾರಣೆಯಂತಹ ಸಾಹಿತ್ಯಗಳನ್ನು ರಚಿಸುವಲ್ಲಿ ಯುವಮನಸ್ಸುಗಳು ಮುಂದಾಗಬೇಕು. ಕನ್ನಡ ಸಾಹಿತ್ಯ ಸಮ್ಮೇಳನಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಯುವಜನತೆ ಇತ್ತ ಆಕರ್ಷಿತರಾಗಬೇಕು ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ.ಶ್ರೀನಾಥ್ ಆಶಯನುಡಿಗಳನ್ನಾಡಿದರು. ನಿಕಟಪೂರ್ವ ಅಧ್ಯಕ್ಷ ಎನ್.ಕರುಣಾಕರ ಗೋಗಡೆ ಹೊಸ್ಮಠ ಮಾನಾಡಿದರು.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಕಲಾಪ್ರದರ್ಶನ ಉದ್ಘಾಟಿಸಿದರು. ಕಡಬ ತಾಲೂಕು ತಹಸೀಲ್ದಾರ ಗಣೇಶ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ., ಎಸ್.ವಿನಯ ಆಚಾರ್, ಗೌರವ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ, ತಾಲೂಕು ಅಧ್ಯಕ್ಷರಾದ ಚಂದ್ರಶೇಖರ ಪೆರಾಲು (ಸುಳ್ಯ), ಡಿ.ಯದುಪತಿ ಗೌಡ (ಬೆಳ್ತಂಗಡಿ), ಉಮೇಶ್ ನಾಯಕ್ (ಪುತ್ತೂರು), ವಿಶ್ವನಾಥ (ಬಂಟ್ವಾಳ), ಡಾ.ಮಂಜುನಾಥ್ ಎಸ್. (ಮಂಗಳೂರು), ಡಾ.ಧನಂಜಯ ಕುಂಬ್ಳೆ (ಉಳ್ಳಾಲ), ವೇಣುಗೋಪಾಲ್ ಶೆಟ್ಟಿ ಕೆ. (ಮೂಡುಬಿದಿರೆ), ಮಿಥುನ್ ಉಡುಪ (ಮೂಲ್ಕಿ), ಕಸಾಪ ಕಡಬ ತಾಲೂಕು ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ, ಶ್ರೀ ರಾಮಕುಂಜೇಶ್ವರ ವಿದ್ಯಾಲಯ ಸಂಚಾಲಕ ಶಿವಪ್ರಸಾದ್ ಇಜ್ಜಾವು, ರಾಮಕುಂಜ ಗ್ರಾಪಂ ಪಿಡಿಒ ಮೋಹನ್, ಸಿಆರ್‌ಪಿ ಮಹೇಶ್, ಸ್ವಾಗತ ಸಮಿತಿ ಅಧ್ಯಕ್ಷ ಕೇಶವ ಅಮೈ, ಸಂಚಾಲಕ ಬಾಲಕೃಷ್ಣ ಯಡಪಡಿತ್ತಾಯ, ಗೌರವಾಧ್ಯಕ್ಷ ರಾಧಾಕೃಷ್ಣ ಕೆ.ಎಸ್., ಉಪಾಧ್ಯಕ್ಷ ಅಬ್ರಾಹಂ ವರ್ಗೀಸ್, ಯಶವಂತ ರೈ ಸುಬ್ರಹ್ಮಣ್ಯ, ಗ್ರೇಸಿ ಪಿಂಟೋ , ಗುರುರಾಜ್ ರೈ ಕೇವಳ, ಪ್ರಕಾಶ್ ರಾಮಕುಂಜ ಮೊದಲಾದವರು ಉಪಸ್ಥಿತರಿದ್ದರು.
ಪಂಚವರ್ಣ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ನಾರಾಯಣ ಭಟ್ ಟಿ. ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಸಮ್ಮೇಳನ ಉದ್ಘಾಟಕರ ಪರಿಚಯವನ್ನು ಸರಿತಾ ನಿರ್ವಹಿಸಿದರು. ಕಡಬ ತಾಲುಕು ಕಸಾಪ ಅಧ್ಯಕ್ಷ ಸೇಸಪ್ಪ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯತ್ರಿ ಯು.ಎನ್. ಸ್ವಾಗತಿಸಿದರು. ಬಾಲಚಂದ್ರ ಮುಚ್ಚಿಂತಾಯ ವಂದಿಸಿದರು. ಚೇತನ್ ಆನೆಗುಂಡಿ ನಿರೂಪಿಸಿದರು.

ಮೆರವಣಿಗೆ

ಕನ್ನಡ ಭುವನೇಶ್ವರಿ ಮೆರವಣಿಗೆಯನ್ನು ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ್ ರಾಮಕುಂಜ ಉದ್ಘಾಟಿಸಿದರು. ಕೊಲ ಗ್ರಾಪಂ ಮಾಜಿ ಅಧ್ಯಕ್ಷೆ ಪುಷ್ಪಾ ಶುಭಾಷ್ ಶೆಟ್ಟಿ ಪುಷ್ಪಾರ್ಚನೆಗೈದರು. ರಾಮಕುಂಜ ಗ್ರಾಪಂ ಮಾಜಿ ಅಧ್ಯಕ್ಷೆ ಸುಚೇತಾ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಪರಿಷತ್ ಧ್ವಜರೋಹಣ ಮಾಡಿದರು. ಕಡಬ ತಾಲೂಕು ಕಸಾಪ ಅಧ್ಯಕ್ಷ ಸೇಸಪ್ಪ ರೈ ಸಮ್ಮೇಳನ ಧ್ವಜರೋಹಣ ಮಾಡಿದರು. ಉಪನ್ಯಾಸಕ ವಿಶ್ವನಾಥ ಶೆಟ್ಟಿ ತಂಡದಿಂದ ನಾಡಗೀತೆ, ರೈತಗೀತೆ ನಡೆಯಿತು. ಉದ್ಘಾಟನೆಯ ಬಳಿಕ ಸಮ್ಮೇಳಾಧ್ಯಕ್ಷರೊಂದಿಗೆ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net