ಹೆದ್ದಾರಿಗಳ ಅಭಿವೃದ್ಧಿ ಶ್ರೀ ಅನುಷ್ಠಾನವಾಗಲಿ

ಅಂಬಲಪಾಡಿಯಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಭಾಸ್ಕರ್​ ಶೆಟ್ಟಿ ಕಡೆಕಾರು, ಹರೀಶ್​ ಶೆಟ್ಟಿ, ಶಿವಕುಮಾರ್​ ಅಂಬಲಪಾಡಿ, ಶ್ರೀಕಾಂತ್​ ಶೆಟ್ಟಿ ಅಂಬಲಪಾಡಿ ಇದ್ದರು.
ಅಂಬಲಪಾಡಿಯಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಭಾಸ್ಕರ್​ ಶೆಟ್ಟಿ ಕಡೆಕಾರು, ಹರೀಶ್​ ಶೆಟ್ಟಿ, ಶಿವಕುಮಾರ್​ ಅಂಬಲಪಾಡಿ, ಶ್ರೀಕಾಂತ್​ ಶೆಟ್ಟಿ ಅಂಬಲಪಾಡಿ ಇದ್ದರು.
Published on

* ಸಂಸದ ಕೋಟ ಮೂಲಕ ಸಚಿವ ಗಡ್ಕರಿಗೆ ಹಿತರಕ್ಷಣಾ ವೇದಿಕೆ ಮನವಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ-66ರ ಅಂಬಲಪಾಡಿಯಲ್ಲಿ ಸರ್ವೀಸ್​ ರಸ್ತೆಯ ಅಗಲೀಕರಣ ಹಾಗೂ ಸಂಬಂಧಿತ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ-66ರ ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆ ವತಿಯಿಂದ ಕೇಂದ್ರ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರಿಗೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೂಲಕ ಗುರುವಾರ (ಡಿ.25) ಮನವಿ ಸಲ್ಲಿಸಲಾಯಿತು.
ಅಂಬಲಪಾಡಿಯಲ್ಲಿ ಸರ್ವೀಸ್​ ರಸ್ತೆ ಕಿರಿದಾಗಿದ್ದು, ಮಳೆ ನೀರು ಹರಿಯುವ ಚರಂಡಿ ಸಹಿತ ಅಗಲೀಕರಣಗೊಳಿಸಬೇಕು. ಅಂಡರ್​ ಪಾಸ್​ನ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಉಡುಪಿ ನಗರ ಸಂಪರ್ಕಿಸುವ ಹಾಗೂ ಉಡುಪಿ ನಗರಸಭಾ ಸ್ವಾಧೀನದಲ್ಲಿರುವ ರಸ್ತೆಯನ್ನು ಈಗಿ ನಡೆಯುತ್ತಿರುವ ಕಾಮಗಾರಿಯೊಂದಿಗೇ ಅಗಲೀಕರಣ ಮಾಡಬೇಕು. ಜಂಕ್ಷನ್​ ರಸ್ತೆಯನ್ನು ರಾ.ಹೆ. ಪ್ರಾಧಿಕಾರದ ನಿಯಮದಂತೆ ಅಂಡರ್​ ಪಾಸ್​ ಮಧ್ಯದಿಂದ 30 ಮೀಟರ್​ ವಿಸ್ತೀರ್ಣದ ಸುತ್ತಳತೆಯಲ್ಲಿ ಅಗಲೀಕರಣಗೊಳಿಸಿ ಲಘು ಮತ್ತು ಘನ ವಾಹನಗಳ ಸುಗಮ, ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ  ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ಕೋಟ, ನಿತಿನ್​ ಗಡ್ಗರಿ ಅವರಿಗೆ ತಾವು ನೀಡಿರುವ ಉಲ್ಲೇಖಿತ ಮನವಿಯನ್ನು ತಲುಪಿಸಲಾಗುವುದು. ತಮ್ಮ ಎಲ್ಲ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಹಿತರಕ್ಷಣಾ ವೇದಿಕೆಯ ಸಂಚಾಲಕ ಭಾಸ್ಕರ್​ ಶೆಟ್ಟಿ ಕಡೆಕಾರು, ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಅಂಬಲಪಾಡಿ ವಾರ್ಡ್​ನ ನಗರಸಭಾ ಮಾಜಿ ಸದಸ್ಯ ಹರೀಶ್​ ಶೆಟ್ಟಿ, ಅಂಬಲಪಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ್​ ಅಂಬಲಪಾಡಿ, ಶ್ರೀಕಾಂತ್​ ಶೆಟ್ಟಿ ಅಂಬಲಪಾಡಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net