ಮೂಲ್ಕಿ ಕೋಸೆಸಾಂವ್ ಅಮ್ಮನವರ ಚರ್ಚ್ ಧರ್ಮಗುರು ಆಂತೋನಿ ಸೆರಾ, ಶಕ್ತಿನಗರ ಸಿಎಸ್‌ಐ ಜೋಶಿಯಾ ಸ್ಮಾರಕ ಚರ್ಚ್ ಧರ್ಮಗುರು ಶಶಿಕಲಾ ಅಂಚನ್ ಆಶೀರ್ವಚಿಸಿದರು. ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕನ್ನಂಗಾರು ಜುಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಮಿಲ್ಾ, ಸಾಹಿತಿ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಪ್ರಧಾನ ಸಂಚಾಲಕಿ ಭಾನುಮತಿ ಶೆಟ್ಟಿ ಕಕ್ವಗುತ್ತು, ವಕೀಲ ರವೀಶ್ ಕಾಮತ್ ಮುಖ್ಯ ಅತಿಥಿಗಳಾಗಿದ್ದರು. ದಿನೇಶ್ ಶೆಟ್ಟಿ, ಪ್ರಾಪ್ತಿ ಆರ್.ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ವಾಸು ಪೂಜಾರಿ ಸ್ವಾಗತಿಸಿದರು. ಸುಧಾಕರ ಕರ್ಕೇರ ವಂದಿಸಿದರು.