ತನುಶ್ರೀ 'ಯೋಗ' ಸಾಧನೆ ಮೇಳೈಸಲಿ

ಯೋಗದಲ್ಲಿ 10ನೇ ಬಾರಿ ವಿಶ್ವ ದಾಖಲೆ ಮಾಡಿದ ತನುಶ್ರೀ ಪಿತ್ರೋಡಿ ಅವರಿಗೆ 10 ಸಾಧಕರಿಗೆ ಸನ್ಮಾನ ಮಾಡುವ ಮೂಲಕ 'ಗೋಲ್ಡನ್​ ಬುಕ್​ ಆಫ್​ ರೆಕಾರ್ಡ್ಸ್​'ನ ಪ್ರಮಾಣ ಪತ್ರ ವಿತರಿಸಲಾಯಿತು. ಯಶ್​ಪಾಲ್​ ಸುವರ್ಣ, ಪ್ರಿಯಾ ಮೇರಿ, ಗೀತಾಂಜಲಿ ಸುವರ್ಣ, ಸಂಧ್ಯಾ, ಉದಯ್​, ರಿತುಶ್ರೀ ಇತರರಿದ್ದರು.
ಯೋಗದಲ್ಲಿ 10ನೇ ಬಾರಿ ವಿಶ್ವ ದಾಖಲೆ ಮಾಡಿದ ತನುಶ್ರೀ ಪಿತ್ರೋಡಿ ಅವರಿಗೆ 10 ಸಾಧಕರಿಗೆ ಸನ್ಮಾನ ಮಾಡುವ ಮೂಲಕ 'ಗೋಲ್ಡನ್​ ಬುಕ್​ ಆಫ್​ ರೆಕಾರ್ಡ್ಸ್​'ನ ಪ್ರಮಾಣ ಪತ್ರ ವಿತರಿಸಲಾಯಿತು. ಯಶ್​ಪಾಲ್​ ಸುವರ್ಣ, ಪ್ರಿಯಾ ಮೇರಿ, ಗೀತಾಂಜಲಿ ಸುವರ್ಣ, ಸಂಧ್ಯಾ, ಉದಯ್​, ರಿತುಶ್ರೀ ಇತರರಿದ್ದರು.
Published on

'ಗೋಲ್ಡನ್​ ಬುಕ್​ ಆಫ್​ ರೆಕಾರ್ಡ್ಸ್​'ನ ಪ್ರಮಾಣ ಪತ್ರ ವಿತರಣೆ

ಉಡುಪಿ: ಬೆಹರೈನ್​ ದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗದಲ್ಲಿ 10ನೇ ಬಾರಿ ದಾಖಲೆ ನಿರ್ಮಿಸುವ ಮೂಲಕ ತನುಶ್ರೀ ಪಿತ್ರೋಡಿ, ವಿಶ್ವದಲ್ಲಿಯೇ ಭಾರತದ ಕೀರ್ತಿ ಹೆಚ್ಚಿಸಿದ್ದಾಳೆ. ಆಕೆ ಕಲಿತ ಶಾಲೆಯಲ್ಲಿಯೇ 'ಗೋಲ್ಡನ್​ ಬುಕ್​ ಆಫ್​ ರೆಕಾರ್ಡ್ಸ್​'ನ ಪ್ರಮಾಣ ಪತ್ರ ವಿತರಿಸಲು ಹೆಮ್ಮೆಯಾಗುತ್ತಿದೆ. ಯೋಗಕ್ಕೆ ವಿಶೇಷ ಮಹತ್ವ, ಪ್ರೋತ್ಸಾಹ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತನುಶ್ರೀ ಭೇಟಿ ಮಾಡಿಸಿ ಆಕೆಯ ಯೋಗ ಸಾಧನೆ ತಿಳಿಸುವ ಪ್ರಯತ್ನ ಮಾಡುತ್ತೇನೆ. ಯೋಗ ಕ್ಷೇತ್ರದಲ್ಲಿ ಆಕೆಯ ಸಾಧನೆ ಇನ್ನಷ್ಟು ಮೇಳೈಸಲಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಸೈಂಟ್​ ಸಿಸಿಲಿ ಹೈಸ್ಕೂಲ್​ನ ಸಭಾಂಗಣದಲ್ಲಿ ಶನಿವಾರ (ನ.22) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅ.24ರಂದು ಬೆಹರೈನ್​ನಲ್ಲಿ 50 ನಿಮಿಷದಲ್ಲಿ ಯೋಗದ 333 ವಿವಿಧ ಪ್ರಕಾರ ಪ್ರದರ್ಶಿಸಿ 10ನೇ ಬಾರಿಗೆ ವಿಶ್ವ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಲಭಿಸಿದ "ಗೋಲ್ಡನ್​ ಬುಕ್​ ಆ್​ ರೆಕಾರ್ಡ್ಸ್​' ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಮಾದರಿಯಾದ ಪಾಲಕರು

ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಮಾತನಾಡಿ, ಯೋಗ ಕ್ಷೇತ್ರದಲ್ಲಿ ತನುಶ್ರೀ ಇಂತಹ ಸಾಧನೆ ಮಾಡುವಲ್ಲಿ ತಂದೆ-ತಾಯಿ ಪರಿಶ್ರಮ, ಪ್ರೋತ್ಸಾಹವೇ ಕಾರಣ. ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ತಂದೆ-ತಾಯಿಗಳು ಹೇಗೆ ಸಹಕರಿಸಬೇಕು ಎನ್ನುವುದಕ್ಕೆ ಸಂಧ್ಯಾ- ಹಾಗೂ ಉದಯ್​ ಪಿತ್ರೋಡಿ ದಂಪತಿ ಮಾದರಿಯಾಗಿದ್ದಾರೆ. ಯೋಗ ಕ್ಷೇತ್ರದಲ್ಲಿ ತನುಶ್ರೀ ಇನ್ನಷ್ಟು ಸಾಧನೆ, ದಾಖಲೆ ಮಾಡಲೆಂದು ಆಶಿಸುತ್ತೇನೆ ಎಂದರು.
ಬಿಲ್ಲವಾಸ್​ ಬೆಹೆರೈನ್​ ಸಂಘದ ಅಧ್ಯಕ್ಷ ಪ್ರಕಾಶ್​ ಅಂಚನ್​, ವಿದ್ಯುತ್​ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ, ಜಿಲ್ಲಾ ನಾಟಕಕಾರ ಸಂಘದ ಅಧ್ಯಕ್ಷ ನವೀನ್​ ಸಾಲಿಯಾನ್​ ಪಿತ್ರೋಡಿ, ವೆಂಕಟ್ರಮಣ ಸ್ಟೋರ್ಟ್ಸ್​ ಆ್ಯಂಡ್​ ಕಲ್ಚರಲ್​ನ ಅಧ್ಯಕ್ಷ ಸಂದೀಪ್​ ಕುಮಾರ್​ ಪಿತ್ರೋಡಿ, ನೃತ್ಯ ಗುರು ರಾಮಕೃಷ್ಣ ಕೊಡಂಚ, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ರಿತುಶ್ರೀ ಪಿತ್ರೋಡಿ ಪ್ರಾರ್ಥಿಸಿದರು. ನಾಗರಾಜ್​ ರಾವ್​ ಕಾರ್ಯಕ್ರಮ ನಿರೂಪಿಸಿದರು. ತನುಶ್ರೀ ತಂದೆ ಉದಯ ಪಿತ್ರೋಡಿ, ತಾಯಿ ಸಂಧ್ಯಾ ಪಿತ್ರೋಡಿ ಸಹಕರಿಸಿದರು.

ಹತ್ತು ಸಾಧಕರಿಗೆ 'ಪ್ರೇರಣಾಶ್ರೀ' ಸನ್ಮಾನ

ತನುಶ್ರೀ ವಿಶ್ವ ದಾಖಲೆಯನ್ನು ಸ್ಮರಣಾರ್ಹವಾಗಿಸಲು ಜಿಲ್ಲೆಯ ವಿವಿಧ ಕ್ಷೇತ್ರಗಳ 10 ಸಾಧಕರಿಗೆ "ಪ್ರೇರಣಾಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಧು ಸಾಲ್ಯಾನ್​ ಮಲ್ಪೆ, ವಿಶು ಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು, ಅಖಿಲಾ ಶೆಟ್ಟಿ, ವಿದ್ವಾನ್​ ಮಧೂರು ಪಿ. ಬಾಲಸುಬ್ರಹ್ಮಣ್ಯಂ, ಪ್ರಕಾಶ್​ ಅಂದ್ರಾದೆ, ಪ್ರಸನ್ನ ಶೆಟ್ಟಿ ಬೈಲೂರು, ರಾಕೇಶ್​ ಸುವರ್ಣ ಬೊಳ್ಜೆ ಹಾಗೂ ಸಂಸ್ಥೆಗಳಾದ ವಾತ್ಸಲ್ಯ ಉಡುಪಿ ಜಿಲ್ಲೆ, ಕೃಷ್ಣಾನುಗ್ರಹ- ಮಮತೆಯ ತೊಟ್ಟಿಲು, ಉಡುಪಿ.
"

ಬಾಲ್ಯದಿಂದಲೇ ತನುಶ್ರೀ ತುಂಬ ಚೂಟಿಯಾದ ಹುಡುಗಿ. ಶಾಲಾ ಅವಧಿಯಲ್ಲಿಯೇ ಯೋಗ ಇನ್ನಿತರ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಳು. ನಮ್ಮ ನಡುವೆಯೇ ಬೆಳೆದ ಆಕೆ ಯೋಗದಲ್ಲಿ ಹತ್ತನೇ ಬಾರಿ ವಿಶ್ವ ದಾಖಲೆ ಮಾಡಿರುವುದು ನಮ್ಮ ಸಂಸ್ಥೆಗೂ ಹೆಮ್ಮೆ ತಂದಿದೆ. ಇಷ್ಟೊಂದು ಸಾಧಿಸಿದ್ದರೂ ಸ್ವಲ್ಪವೂ ಅಹಂಕಾರವಿಲ್ಲದೆ ತನ್ನಂತೆ ಇತರರೂ ಬೆಳೆಯಬೇಕು ಎನ್ನುವ ವಿಶಿಷ್ಟ ಗುಣ ಹೊಂದಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net