ನಿರಂತರವಾಗಿ ನಡೆಯಲಿ ಧಾರ್ಮಿಕ ದೇವತಾ ಕಾರ್ಯ

 ಬೆಣ್ಗೇರೆ ಶ್ರೀ ನಾಗ ದೇವಸ್ಥಾನದಲ್ಲಿ ನಾಗಮಂಡಲೋತ್ಸವ ಹಾಗೂ ಅಷ್ಟಬಂಧ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ರಾವೇಂದ್ರ ಅಡಿಗ, ಡಾ.ವಿಜಯ ಮಂಜರು, ಸತೀಶ ಮೇಸ್ತ ಶಿರೂರು, ಮಂಜುನಾಥ ಖಾರ್ವಿ ಮತ್ತಿತರರಿದ್ದರು.
ಬೆಣ್ಗೇರೆ ಶ್ರೀ ನಾಗ ದೇವಸ್ಥಾನದಲ್ಲಿ ನಾಗಮಂಡಲೋತ್ಸವ ಹಾಗೂ ಅಷ್ಟಬಂಧ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ರಾವೇಂದ್ರ ಅಡಿಗ, ಡಾ.ವಿಜಯ ಮಂಜರು, ಸತೀಶ ಮೇಸ್ತ ಶಿರೂರು, ಮಂಜುನಾಥ ಖಾರ್ವಿ ಮತ್ತಿತರರಿದ್ದರು.
Published on
ಕುಂದಾಪುರ: ಬೆಣ್ಗೇರೆಯಲ್ಲಿ ಶ್ರೀ ನಾಗ ದೇವಸ್ಥಾನ ಸ್ಥಾಪಿಸಿ, ಸಂಪೂರ್ಣ ವ್ಯವಸ್ಥೆ ಇರುವ ದೇವಸ್ಥಾನವಾಗಿ ಮೂಡಿರುವುದು ಮೇಸ್ತ ಸವಾಜದ ಹೆಮ್ಮೆ. ನಾಗರಾಧನೆಯಿಂದ ಎಲ್ಲರಿಗೂ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಇಂತಹ ಧಾರ್ಮಿಕ ದೇವತಾ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಬೆಣ್ಗೇರೆ ಶ್ರೀ ನಾಗ ದೇವಸ್ಥಾನ ಅಧ್ಯಕ್ಷ ಉಮೇಶ ಎಲ್.ಮೇಸ್ತ ಹೇಳಿದರು.
ಬೆಣ್ಗೇರೆ ಶ್ರೀ ನಾಗ ದೇವಸ್ಥಾನದಲ್ಲಿ 51ನೇ ನಾಗಮಂಡಲೋತ್ಸವ ಹಾಗೂ ಅಷ್ಟಬಂಧ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಪ್ರಯುಕ್ತ ಶುಕ್ರವಾರ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ದೇವಸ್ಥಾನದ ಪ್ರಧಾನ ಪುರೋಹಿತ ರಾವೇಂದ್ರ ಅಡಿಗ, ಪಾಂಡೇಶ್ವರದ ಅಷ್ಟಾಂಗ ಯೋಗ ಗುರುಕುಲದ ಡಾ.ವಿಜಯ ಮಂಜರು, ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸವಾಜದ ಉಪಾಧ್ಯಕ್ಷ ಸತೀಶ ಮೇಸ್ತ ಶಿರೂರು, ಬೆಣ್ಗೇರೆ ಖಾರ್ವಿ ಸವಾಜ ಅಧ್ಯಕ್ಷ ಮಂಜುನಾಥ ಖಾರ್ವಿ, ಮತ್ಸೊೃೀದ್ಯಮಿ ಮಡಿ ಸುರೇಶ ಖಾರ್ವಿ, ನಾಗಶ್ರೀ ಮಹಿಳಾ ಮಂಡಳಿ ಅಧ್ಯಕ್ಷೆ ಕುಸುಮಾ ಮೇಸ್ತ, ಶ್ರೀ ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್ ಅಧ್ಯಕ್ಷ ರಾಮದಾಸ ಕೆ.ಮೇಸ್ತ, ದೇವಸ್ಥಾನ ಕಾರ್ಯದರ್ಶಿ ಶ್ರೀಧರ ಪಿ.ಮೇಸ್ತ ಮೊದಲಾದವರು ಉಪಸ್ಥಿತರಿದ್ದರು. ಪ್ರಕಾಶ ಮೇಸ್ತ ಸ್ವಾಗತಿಸಿದರು. ಶ್ರೀನಿವಾಸ ಮೇಸ್ತ ವಂದಿಸಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net