

ಕೋಟ: ಕನ್ನಡ ನಾಡು ನುಡಿಯ ಜತೆಗೆ ಭಾಷಾಭಿಮಾನ ಹೆಚ್ಚಬೇಕು. ಆ ಮೂಲಕ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಕೋಟ ಆರಕ್ಷಕ ಠಾಣೆ ಎಎಸ್ಐ ಗೋಪಾಲ್ ಪೂಜಾರಿ ಹೇಳಿದರು.
ಕೋಟದ ಡಾ.ಕೋಟ ಶಿವರಾಮ ಕಾರಂತರ ಮನೆಯಂಗಳದಲ್ಲಿ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಕೋಟ ಆಶ್ರಯದಲ್ಲಿ 29ನೇ ವರ್ಷದ ಸದ್ಭಾವನಾ-2026 ಶೀರ್ಷಿಕೆಯಡಿ ಭಾನುವಾರ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪರಿಸರವಾದಿ ಕೋ.ಗಿ.ನಾ ಮಾತನಾಡಿದರು. ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲ ಅಧ್ಯಕ್ಷ ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಕೋಟ ಜಾಮೀಯಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಉದ್ಯಮಿ ರಮೇಶ್ ಪ್ರಭು, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣ ಸಂಘಟನೆ ಗೌರವಾಧ್ಯಕ್ಷ ಸತೀಶ್ ಎಚ್.ಕುಂದರ್, ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ, ಅಘೋರೇಶ್ವರ ಕಲಾರಂಗದ ಸ್ಥಾಪಕ ಪ್ರಭಾಕರ್ ನಾಯರಿ, ಧರ್ಮಸ್ಥಳ ಗ್ರಾ.ಯೋ.ಕೋಟ ವಲಯ ಮೇಲ್ವಿಚಾರಕ ನಾಗೇಶ್ ಉಪಸ್ಥಿತರಿದ್ದರು. ಸುಜಾತಾ ಬಾಯರಿ ಸ್ವಾಗತಿಸಿದರು. ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ್ ವಂದಿಸಿದರು.