ದೇಶದ ಪ್ರಗತಿಗೆ ಇರಲಿ ಕೊಡುಗೆ

  ಮಂಗಳೂರು ವಿವಿ 44ನೇ ಟಿಕೋತ್ಸವದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ, ದೈವ ನರ್ತಕ ಡಾ.ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು. ಥಾವರ್‌ಚಂದ್ ಗೆಹಲೋತ್, ಕ್ಯಾ.ಬ್ರಿಜೇಶ್ ಚೌಟ, ಪ್ರೊ.ಪಿ.ಎಲ್.ಧರ್ಮ ಇದ್ದರು.
ಮಂಗಳೂರು ವಿವಿ 44ನೇ ಟಿಕೋತ್ಸವದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ, ದೈವ ನರ್ತಕ ಡಾ.ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು. ಥಾವರ್‌ಚಂದ್ ಗೆಹಲೋತ್, ಕ್ಯಾ.ಬ್ರಿಜೇಶ್ ಚೌಟ, ಪ್ರೊ.ಪಿ.ಎಲ್.ಧರ್ಮ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಮಂಗಳೂರು
ದೇಶದ ಪ್ರಗತಿಗೆ ನಾವು ನಮ್ಮದೇ ಆದ ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕು. ದೇಶ ಮತ್ತು ಸವಾಜದ ನಿರೀಕ್ಷೆಗಳಿಗೆ ತಕ್ಕಂತೆ ನಡೆದು ತಮ್ಮ ಶಿಕ್ಷಣ, ಪ್ರತಿಭೆಯನ್ನು ಸಮಾಜ ಕಲ್ಯಾಣಕ್ಕಾಗಿ ಬಳಸಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಕರೆ ನೀಡಿದರು.
ಶನಿವಾರ ಮಂಗಳೂರು ವಿವಿಯ 44ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಾಧಕರಿಬ್ಬರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಿ, ರ‌್ಯಾಂಕ್ ವಿಜೇತರಿಗೆ ಚಿನ್ನದ ಪದಕ ಮತ್ತು ಪದವಿ ಪ್ರದಾನ ನೆರವೇರಿಸಿ ಮಾತನಾಡಿದರು.
ತಮ್ಮ ಶಿಕ್ಷಣದ ಪಯಣಕ್ಕೆ ವಾರ್ಗದರ್ಶನ ನೀಡಿದ ತಾಯಿ-ತಂದೆ, ಗುರುಗಳು ಮತ್ತು ಶಿಕ್ಷಕರಿಗೆ ಕತಜ್ಞತೆ ಸಲ್ಲಿಸುವುದನ್ನು ವಿದ್ಯಾರ್ಥಿಗಳು ಮರೆಯಬಾರದು. ಅವರಿಗೆ ಗೌರವ ಸಲ್ಲಿಸುವುದು ವಿದ್ಯಾರ್ಥಿಯ ಕರ್ತವ್ಯ. ಪದವಿ ಶಿಕ್ಷಣ ಪೂರ್ಣಗೊಂಡ ಅನಂತರ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಮರೆಯಬಾರದು. ಪ್ರತಿಯೊಂದು ಕ್ಷೇತ್ರದಲ್ಲೂ ವಿಭಿನ್ನ ಸಾಮರ್ಥ್ಯ ಮತ್ತು ಕೌಶಲಗಳ ಅಗತ್ಯವಿದ್ದರೂ, ನಿರಂತರ ಕಲಿಕಾ ಮನೋಭಾವ, ನೈತಿಕ ಮೌಲ್ಯಗಳ ಪಾಲನೆ, ಸತ್ಯನಿಷ್ಠೆ, ಕಠಿಣ ಪರಿಸ್ಥಿತಿಗಳಲ್ಲಿ ಧೈರ್ಯದಿಂದ ಎದುರಿಸುವ ಶಕ್ತಿ ಗಳಿಸಿಕೊಳ್ಳುವುದು ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಅಗತ್ಯ ಎಂದರು. ಘಟಿಕೋತ್ಸವ ಭಾಷಣ ವಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಈ ಮಣ್ಣಿನ ಅಸ್ಮಿತೆಯನ್ನು ವಿದ್ಯಾರ್ಥಿಗಳು ಉಳಿಸಬೇಕು ಎಂದರು. ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಕುಲಸಚಿವ ಪ್ರೊ.ದೇವೇಂದ್ರಪ್ಪ ಉಪಸ್ಥಿತರಿದ್ದರು.

ಡಾ.ರವೀಶ್, ಹಾಜಬ್ಬರಿಗೆ ಗೌರವ ಡಾಕ್ಟರೇಟ್

ಅಕ್ಷರ ಸಂತ ಹರೇಕಳ ಹಾಜಬ್ಬ, ದೈವ ನರ್ತಕ ಡಾ.ರವೀಶ್ ಪಡುಮಲೆ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪ್ರದಾನಿಸಿದರು. ತೆಂಕುತಿಟ್ಟಿನ ಹಿರಿಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಿಸಲಾಗಿದ್ದು, ಏ.13ರಂದು ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.

162 ಡಾಕ್ಟರೇಟ್, 56 ಚಿನ್ನದ ಪದಕ

ಘಟಿಕೋತ್ಸವದಲ್ಲಿ ಮಂಗಳೂರು ವಿವಿಲ ವಿವಿಧ ವಿಭಾಗಗಳ 162 ಮಂದಿಗೆ ಡಾಕ್ಟರೇಟ್ ಪದವಿ ನೀಡಲಾಯಿತು. ವಿವಿಧ ಸ್ನಾತಕ, ಸ್ನಾತಕೋತ್ತರ ವಿಭಾಗದಲ್ಲಿ 147 ಮಂದಿ ರ‌್ಯಾಂಕ್ ಗಳಿಸಿದ್ದು, ಅವರಲ್ಲಿ ಪ್ರಥಮ ರ‌್ಯಾಂಕ್ ಪಡೆದ 69 ಮಂದಿಗೆ ರ‌್ಯಾಂಕ್ ಪ್ರಮಾಣಪತ್ರ, ಚಿನ್ನದ ಪದಕ, ಕೆಲವರಿಗೆ ನಗದು ಬಹುಮಾನಗಳನ್ನೂ ವಿತರಿಸಲಾಯಿತು.

ಬೀಡಿ ಕಟ್ಟಿ, ಹಾಲು ಮಾರಿ ರ‌್ಯಾಂಕ್ ಪಡೆದೆ

ಮಂಗಳೂರು ವಿವಿಯ ಸ್ನಾತಕೋತ್ತರ ವಿಭಾಗದ ಎಂಎ(ಕನ್ನಡ)ಯಲ್ಲಿ ಪ್ರಥಮ ರ‌್ಯಾಂಕ್ ಪಡೆದು 2 ಚಿನ್ನದ ಪದಕ ಮತ್ತು 7 ನಗದು ಪುರಸ್ಕಾರವನ್ನು ಪಡೆದಿರುವ ವಿದ್ಯಾರ್ಥಿನಿ ಸಂಧ್ಯಾ ಎನ್.ಮಣಿನಾಲ್ಕೂರು ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಕನ್ನಡ ನನ್ನ ನೆಚ್ಚಿನ ಭಾಷೆಯಾದದ್ದರಿಂದ ಕನ್ನಡದಲ್ಲೇ ಎಂಎ ಆರಿಸಿಕೊಂಡೆ. ಬಿಎಸ್ಸಿಯನ್ನೂ ಮುಗಿಸಿದ್ದೇನೆ. ಬಿಎಡ್ ಮಾಡುತ್ತಿದ್ದೇನೆ. ಅದನ್ನು ಮುಗಿಸಿ ಪಿಎಚ್.ಡಿ ಮಾಡುತ್ತೇನೆ. ಉಪನ್ಯಾಸಕಿಯಾಗುವ ಕನಸಿದೆ. ಕನ್ನಡದಲ್ಲೇ ಕಥೆ, ಕವನ, ಪ್ರಬಂಧ ಬರೆಯುತ್ತಿದ್ದೆ. ಅಪ್ಪ ಕೂಲಿ ಮಾಡುತ್ತಿದ್ದು, ಕೈನೋವು ಕಾರಣ ಹೆಚ್ಚು ದುಡಿಯಲು ಸಾಧ್ಯವಿರಲಿಲ್ಲ. ತಾಯಿ ಬೀಡಿ ಕಟ್ಟುತ್ತಿದ್ದರು. ಅವರೊಂದಿಗೆ ನಾನು ಬೀಡಿ ಕಟ್ಟುತ್ತಿದ್ದೆ. ಬೆಳಗ್ಗೆ ಬೇಗ ಎದ್ದು ಹಾಲು ಕರೆದು ಮನೆ-ಮನೆಗೆ ಹಂಚಿ ಕಾಲೇಜಿಗೆ ತೆರಳುತ್ತಿದ್ದೆ. ಕಷ್ಟದ ಜೀವನವಿತ್ತು. ಆದರೂ ಶಿಕ್ಷಣ ನನ್ನ ಕೈಹಿಡಿಯಿತು ಎಂದು ಹೇಳಿದ್ದಾರೆ. ಎಂಎ ಜರ್ನಲಿಸಂ ಆ್ಯಂಡ್ ಮಾಸ್ ಕಮ್ಯೂನಿಕೇಶನ್‌ನಲ್ಲಿ ಪ್ರಥಮ ರ‌್ಯಾಂಕ್ ಪಡೆದಿರುವ ಉಪ್ಪಳದ ಾತ್ಮಾ ಸಲೂಲ ಅವರು ಪ್ರತಿಕ್ರಿಯಿಸಿ, ಮನೆಯವರು ಸಂಪೂರ್ಣ ಸಹಕಾರ, ಕಠಿಣ ಪರಿಶ್ರಮ ನನ್ನ ಕೈಹಿಡಿಯಿತು. ಪಿಎಚ್‌ಡಿ ಮಾಡಿ ಮತ್ತೆ ಏನೆಂದು ನಿರ್ಧರಿಸಬೇಕಿದೆ ಎಂದಿದ್ದಾರೆ.

ವಿದ್ಯಾರ್ಥಿಗಳು ಭವಿಷ್ಯಕ್ಕಾಗಿ ಪರಿಶ್ರಮ ಪಡಬೇಕು. ದೃಢಸಂಕಲ್ಪ ಹೊಂದಬೇಕು. ಡಿಜಿಟಲ್ ಕ್ರಾಂತಿಯೊಂದಿಗೆ ಸಾಗಬೇಕು. ತಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ವೈಯಕ್ತಿಕ ಲಾಭಕ್ಕೆ ಮಾತ್ರ ಬಳಸಿಕೊಳ್ಳಬಾರದು. ರಾಷ್ಟ್ರದ ಹಿತ, ಸವಾಜಕ್ಕಾಗಿ ಬಳಸಬೇಕು. ಇಂತಹ ಗುಣಗಳು ಅವರನ್ನು ಒಳ್ಳೆಯ ವತ್ತಿಪರರಷ್ಟೇ ಅಲ್ಲ, ಜವಾಬ್ದಾರಿಯುತ ಮತ್ತು ಸಂವೇದನಾಶೀಲ ನಾಗರಿಕರನ್ನಾಗಿ ರೂಪಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net