ಸಾಗರವಾಗಲಿ ಹಿಂದೂ ಸಮಾಜ

 ಸಸಿಹಿತ್ಲು ಭಗವತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಕಡಲ ತಡಿಯಲ್ಲಿ ಗಂಗಾರತಿ ನಡೆಯಿತು.
ಸಸಿಹಿತ್ಲು ಭಗವತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಕಡಲ ತಡಿಯಲ್ಲಿ ಗಂಗಾರತಿ ನಡೆಯಿತು.
Published on
ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಸಸಿಹಿತ್ಲು ಭಗವತಿ ಸಾಗರದಿಂದ ಎದ್ದು ಬಂದ ನೆನಪಿಗಾಗಿ ಗಂಗಾರತಿ ಮೂಲಕ ಹೊಸ ಭಾರತ ಎದ್ದು ನಿಂತಿದೆ. ಪರಿಸರದ ರಕ್ಷಣೆ ನಮ್ಮದಾಗಲಿ. ಶಾಂತಿ, ಸದೃಢ ಮತ್ತು ಬಲಿಷ್ಠವಾದ ನಮ್ಮ ದೇಶ ಇವತ್ತಿನ ಯುದ್ಧದ ಸಂದರ್ಭದಲ್ಲಿಯೂ ಶಾಂತಿಯಿಂದ ಕೂಡಿರಲು ಸಾಧ್ಯವಾಗಿದೆ ಎಂಬುದಕ್ಕೆ ಹೆಮ್ಮೆ ಪಡೋಣ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸಸಿಹಿತ್ಲು ಭಗವತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಕಡಲತಡಿಯಲ್ಲಿ ಗಂಗಾರತಿಯ ಸಂದರ್ಭ ಮಾತನಾಡಿದರು.
ನಮ್ಮ ಅಜ್ಜ, ಮುತ್ತಜ್ಜ, ಅವರ ಅಜ್ಜ ಹೀಗೆ ಐನೂರು ವರುಷಗಳಿಂದ ಕಾಯುತ್ತಿದ್ದ ಅಯೋಧ್ಯೆ, ಕಾಶಿಯಲ್ಲಿ ದೇವಸ್ಥಾನಗಳು ಎದ್ದು ನಿಂತಂತೆ ನಮ್ಮ ದೇಶ ಎದ್ದು ನಿಂತಿದೆ. ನಮ್ಮ ದೇಶದಲ್ಲಿ ಮುಸ್ಲಿಮರು ನೆಮ್ಮದಿಯಲ್ಲಿ ರಂಜಾನ್ ಆಚರಿಸುತ್ತಿದ್ದಾರೆ. ಮುಸ್ಲಿಂ ಆಡಳಿತದ ಕೊಲ್ಲಿ ರಾಷ್ಟ್ರಗಳಲ್ಲಿ ಇಂದು ಬಾಂಬ್ ದಾಳಿಯಾಗುತ್ತಿದೆ. ನಾವಿಂದು ನೆಮ್ಮದಿಯ ದಿನಗಳನ್ನು ಕಾಣುತ್ತಿದ್ದೇವೆ ಎಂದರೆ ಅದು ನಮ್ಮ ಹಿರಿಯರ ಹೋರಾಟದ ಫಲ. ಜಾತಿಗಳು ನಮ್ಮ ನಮ್ಮ ಮನೆ ಒಳಗಿರಲಿ. ಹೊರಗಡೆ ಬಂದಾಗ ನಾವೆಲ್ಲರೂ ಹಿಂದೂಗಳೆಂಬ ಒಗ್ಗಟ್ಟು ಇರಲಿ. ಹಿಂದೂ ಸಮಾಜ ಸಾಗರವಾಗಲಿ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ದೇವಸ್ಥಾನದ ಮೊಕ್ತೇಸರ ಚಂದ್ರಶೇಖರ ಬೆಳ್ಚಡ, ಮುಂಬೈ ಸಮಿತಿಯ ವೇದ ಪ್ರಕಾಶ್ ಶ್ರೀಯಾನ್ ನರೇಶ್ ಶೆಣೈ, ಎಲ್.ವಿ.ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ರಾಜೇಂದ್ರ ಪ್ರಸಾದ್ ಎಕ್ಕಾರು ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net