ಎಲ್ಲರಲ್ಲಿರಲಿ ಹಸಿದವರಿಗೆ ಅನ್ನ ನೀಡುವ ಮನೋಭಾವ

ಭಜನೋತ್ಸವ ಧಾರ್ಮಿಕ ಸಭೆಯಲ್ಲಿ ಶ್ರೀ ಈಶವಿಠಲದಾಸ ಸ್ವಾಮೀಜಿ ಆಶೀರ್ವಚನ
 ಹಟ್ಟಿಯಂಗಡಿ ಶ್ರೀ ಮಾರಲದೇವಿ ಭಜನಾ ಮಂಡಳಿಯ ಸುವರ್ಣ ಸಂಭ್ರಮ ಭಜನೋತ್ಸವದ ಧಾರ್ಮಿಕ ಸಮಾರಂಭವನ್ನು ಶ್ರೀ ಈಶವಿಠಲದಾಸ ಸ್ವಾಮೀಜಿ ಉದ್ಘಾಟಿಸಿದರು. ಪ್ರಮುಖರಾದ ಸುಧಾಕರ ಶೆಟ್ಟಿ, ಎಚ್.ಬಾಲಚಂದ್ರ ಭಟ್, ರಾಜೇಶ ಕೆ.ಸಿ., ವಸಂತ ಗಿಳಿಯಾರ್ ಇದ್ದರು.
ಹಟ್ಟಿಯಂಗಡಿ ಶ್ರೀ ಮಾರಲದೇವಿ ಭಜನಾ ಮಂಡಳಿಯ ಸುವರ್ಣ ಸಂಭ್ರಮ ಭಜನೋತ್ಸವದ ಧಾರ್ಮಿಕ ಸಮಾರಂಭವನ್ನು ಶ್ರೀ ಈಶವಿಠಲದಾಸ ಸ್ವಾಮೀಜಿ ಉದ್ಘಾಟಿಸಿದರು. ಪ್ರಮುಖರಾದ ಸುಧಾಕರ ಶೆಟ್ಟಿ, ಎಚ್.ಬಾಲಚಂದ್ರ ಭಟ್, ರಾಜೇಶ ಕೆ.ಸಿ., ವಸಂತ ಗಿಳಿಯಾರ್ ಇದ್ದರು.
Published on: 

ಕುಂದಾಪುರ: ಸಮಾಜಕ್ಕೆ ನಾವು ಏನು ಕೊಡುತ್ತೆವೆಯೋ ಅದು ತಿರುಗಿ ಬರುತ್ತದೆ. ಜೀವನದಲ್ಲಿ ಹಸಿದವನಿಗೆ ಒಂದು ಹಿಡಿ ಅಕ್ಕಿ ನೀಡುವ ಮನೋಭಾವ ರೂಢಿಸಿಕೊಳ್ಳಬೇಕಿದೆ ಎಂದು ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.

ಹಟ್ಟಿಯಂಗಡಿ ಶ್ರೀ ಮಾರಲದೇವಿ ಭಜನಾ ಮಂಡಳಿಯ ಸುವರ್ಣ ಸಂಭ್ರಮ ಭಜನೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಭಾನುವಾರ ಆಶೀರ್ವಚನ ನೀಡಿದರು.

ಸುವರ್ಣ ಸಂಭ್ರಮ ಭಜನೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಹಟ್ಟಿಯಂಗಡಿ ಅಧ್ಯಕ್ಷತೆ ವಹಿಸಿದ್ದರು. ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ಎಚ್.ಬಾಲಚಂದ್ರ ಭಟ್, ಕುಂದಕನ್ನಡ ಅಧ್ಯಯನ ಪೀಠದ ಸದಸ್ಯ ರಾಜೇಶ ಕೆ.ಸಿ. ಮತ್ತು ಗಿಳಿಯಾರು ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರ್ ಶುಭ ಹಾರೈಸಿದರು.

50 ವರ್ಷಗಳಿಂದ ಭಜನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಭಜನಾ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುವರ್ಣ ಸಂಭ್ರಮೋತ್ಸವ ಪ್ರಯುಕ್ತ ದೇವಳದಲ್ಲಿ ಬೆಳಗ್ಗೆ ಸಾಮೂಹಿಕ ಚಂಡಿಕಾಹೋಮ, ಭಜನಾ ಕಾರ್ಯಕ್ರಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಶ್ರೀ ಕ್ಷೇತ್ರ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಮಾಜಿ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಹಟ್ಟಿಯಂಗಡಿ ಜೈನ ಬಸದಿಯ ಸುರೇಂದ್ರ ಕುಮಾರ್ ಜೈನ್, ಶ್ರೀ ವಾರಲದೇವಿ ಭಜನಾ ಮಂಡಳಿ ಅಧ್ಯಕ್ಷ ರತ್ನಾಕರ ಶೆಟ್ಟಿ ತುಪ್ಪಾರಬೆಟ್ಟು ಉಪಸ್ಥಿತರಿದ್ದರು. ಸಂತೋಷ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಅಭಿಜಿತ್ ನಿರೂಪಿಸಿದರು.