ಮಟ್ಕಾ ಆರೋಪಿ ರಾಮರಾಜ್​ಗೆ ಗಡಿಪಾರು

ಚಿಕ್ಕಮಗಳೂರು ನಗರ ಪೊಲೀಸ್​ ಠಾಣಾ ವ್ಯಾಪ್ತಿಗೆ ಗಡಿಪಾರು ಆಗಿರುವ ಆರೋಪಿ ರಾಮರಾಜ್​ ಯಾನೆ ರಮೇಶ ಅರಸ್​.
ಚಿಕ್ಕಮಗಳೂರು ನಗರ ಪೊಲೀಸ್​ ಠಾಣಾ ವ್ಯಾಪ್ತಿಗೆ ಗಡಿಪಾರು ಆಗಿರುವ ಆರೋಪಿ ರಾಮರಾಜ್​ ಯಾನೆ ರಮೇಶ ಅರಸ್​.
Published on

* ಉಡುಪಿ ಎಸ್ಪಿ ಹರಿರಾಮ್​ ಶಂಕರ್​ ಆದೇಶ

* ಚಿಕ್ಕಮಗಳೂರು ನಗರ ಠಾಣೆ ವ್ಯಾಪ್ತಿಗೆ ರವಾನೆ

ಉಡುಪಿ: ಉಡುಪಿ ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನಿಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ಅವರು ಶನಿವಾರ (ಜು.18) ಗಡಿಪಾರು ಆದೇಶ ಹೊರಡಿಸಿದ್ದಾರೆ.
ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಮಠದಬೆಟ್ಟು ನಾಗಬನದ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದ ರಾಮರಾಜ್​ ಯಾನೆ ರಮೇಶ ಅರಸ್​ (48) ಗಡಿಪಾರು ಆದ ಆರೋಪಿ.
ವ್ಯಕ್ತಿಯ ವಿರುದ್ಧ ಮಟ್ಕಾ ಜುಗಾರಿ ನಡೆಸಿದ ಕುರಿತು ಒಟ್ಟು 5 ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 4 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಬಾಕಿ 1 ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ನಗರ ಪೊಲೀಸ್​ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ಹರಿರಾಮ್​ ಶಂಕರ್​ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net