ಮಠದಬೆಟ್ಟು- ಹಾಲಿಕೊಡ್ಲು ರಸ್ತೆ ವಿಸ್ತರಣೆಯಾಗದೆ ಕಿರಿದಾದ ರಸ್ತೆಯಿಂದ ಸವಾರರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದರು. ಆದರೆ ಈಗ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿದ್ದು, ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿದೆ.
ರಸ್ತೆ ಎರಡು ಬದಿ ಬೃಹತ್ ಗಾತ್ರದ ಕಂದಕ ನಿರ್ವಾಣವಾಗಿ, ಕೇವಲ ಒಂದು ವಾಹನ ಚಲಿಸುವಷ್ಟು ಅವಕಾಶವಿದ್ದು, ಅಪಘಾತಗಳು ಸಂಭವಿಸುತ್ತಿತ್ತು. ಭಾರಿ ವಾಹನ ಬಂದರೆ ಸೈಡ್ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ರಸ್ತೆ ವಿಸ್ತರಣೆಯಿಂದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ.
ರಸ್ತೆ ನಿರ್ವಾಣಕ್ಕೆ ಆಗ್ರಹಿಸಿ ಸಾವಾಜಿಕ ಕಾರ್ಯಕರ್ತ ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆದಿತ್ತು. ಇಲ್ಲಿನ ಸಮಸ್ಯೆಗಳ ಬಗ್ಗೆ ವಿಜಯವಾಣಿ ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಕಾಮಗಾರಿ ಆರಂಭವಾದಾಗ ರಸ್ತೆ ಕೆಲಸ ನಿಲ್ಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತೃತ್ವದ ತಂಡ ಅಧಿಕಾರಿಗಳ ಮನವೊಲಿಸಿತು. ನಂತರ ಅಧಿಕಾರಿಗಳು ಮರವನ್ನು ತೆರವು ವಾಡದೆ ನಿರ್ದಿಷ್ಟ ಜಾಗದಲ್ಲಿ ವಿಸ್ತರಣೆ ವಾಡಲು ಸೂಚನೆ ನೀಡಿದ್ದಾರೆ.
ಕಿರಿದಾದ ರಸ್ತೆಯಿಂದ ಆಗಾಗ ಅಪಘಾತಗಳು ನಡೆಯುತ್ತಿತ್ತು. ಪ್ರತಿಭಟನೆ, ರಸ್ತೆ ತಡೆ ನಡೆಸಿದ್ದರಿಂದ ರಸ್ತೆ ವಿಸ್ತರಣೆಗೆ ಅವಕಾಶ ದೊರಕಿದೆ. ಇದರಿಂದ ವಾಹನ ಸವಾರರಿಗೆ ಉಪಯೋಗವಾಗಲಿದೆ.