

ಈ ಯೋಜನೆ ಜಾರಿಯಾಗಿ ಸಿದ್ದಾಪುರ, ಉಳ್ಳೂರು, ಹೊಸಂಗಡಿ, ಕೆಳಭಾಗ, ಬಲಭಾಗದವರಿಗೂ ನೀರು ಸಿಗಬೇಕು. ಶೀಘ್ರ ಸುರತ್ಕಲ್ ಎನ್‌ಐಟಿಕೆ ತಜ್ಞರನ್ನು ಕರೆಸಿ ಪರಿಶೀಲಿಸಿ ಮತ್ತೆ ಕಾಮಗಾರಿ ಕೈಗೊಳ್ಳಲಿ. ನಾನು ಈ ಯೋಜನೆ ನಿಲ್ಲಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕರು ಮನೆ-ಮನೆಗೆ ಪತ್ರ ಹಂಚುತ್ತಿದ್ದಾರೆ. ಅದನ್ನು ಶಾಸಕರು ನಿರೂಪಿಸಿದರೆ ರಾಜಕೀಯ ಸನ್ಯಾಸ ಸ್ವೀಕರಿಸುವೆ. ಇಲ್ಲದಿದ್ದರೆ ಅವರು ರಾಜಕೀಯ ಸನ್ಯಾಸ ಸ್ವೀಕರಿಸಲಿ. ಬಲದಂಡೆ ಯೋಜನೆಯ ಬಗ್ಗೆಯೂ ಸಿಎಂ ಗಮನಕ್ಕೆ ತಂದಿದ್ದು, ಮುಂಬರುವ ಬಜೆಟ್‌ನಲ್ಲಿ ಕೊಡುವುದಾಗಿ ತಿಳಿಸಿದ್ದಾರೆ.