12ರಂದು ಕಟಪಾಡಿಯಲ್ಲಿ ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹ
ಸಾಮೂಹಿಕ ವಿವಾಹ
Published on
ಪಡುಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರದ ವಿಶ್ವ ಬ್ರಾಹ್ಮಣ ಯುವ ಸಂಘಟನೆ ದಶಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಸಾಮೂಹಿಕ ವಿವಾಹ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಡಿ.12ರಂದು ಬೆಳಗ್ಗೆ 8.36ಕ್ಕೆ ನಡೆಯಲಿದೆ ಎಂದು ಸಂಘಟನೆ ಅಧ್ಯಕ್ಷ ಬಿಳಿಯಾರು ಸುಧಾಕರ ಆಚಾರ್ಯ ತಿಳಿಸಿದರು.
ವಿಶ್ವಕರ್ಮ ಸಮಾಜದ 12 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಬೆಳಗ್ಗೆ 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಸಂಗಮವನ್ನು ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಅನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹಾಗೂ ಹಾಸನ ಅರೆಮಾದನ ಹಳ್ಳಿ ಶ್ರೀ ಸುಜ್ಞಾನಪ್ರಭು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಉದ್ಘಾಟಿಸುವರು.

ವಧುವಿಗೆ ಚಿನ್ನದ ತಾಳಿಗುಂಡು, ಬೆಳ್ಳಿಯ ಕರಿಮಣಿ, ಕಾಲುಂಗುರ ಸೇರಿದಂತೆ ವಧು-ವರರಿಗೆ ಮದುವೆ ವಸ್ತ್ರಗಳನ್ನು ನೀಡಲಾಗುವುದು. 12 ಪ್ರತ್ಯೇಕ ಮಂಟಪಗಳಲ್ಲಿ ಪ್ರತ್ಯೇಕ ಪುರೋಹಿತರಿಂದ ಸಂಪ್ರದಾಯಬದ್ಧವಾಗಿ ವಿವಾಹ ನಡೆಯಲಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಂಘಟನೆ ಗೌರವಾಧ್ಯಕ್ಷ ಸದಾಶಿವ ಆಚಾರ್ಯ, ಉಪಾಧ್ಯಕ್ಷ ವಿಜಯ ಆಚಾರ್ಯ ಪಡುಬಿದ್ರಿ, ರತ್ನಾಕರ ಕುರ್ಕಾಲು, ರಾಜೇಶ್ ಆಚಾರ್ಯ, ಸತೀಶ್ ಆಚಾರ್ಯ ಪಡುಬಿದ್ರಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net