14 ವಟುಗಳಿಗೆ ಸಾಮೂಹಿಕ ಉಪನಯನ

ಉಡುಪಿಯ ಸಂತೆಕಟ್ಟೆ ಕಲ್ಯಾಣಪುರದ ದೇವಾಲಯದಲ್ಲಿ ಪದ್ಮಶಾಲಿ ಸಮಾಜದ 14 ವಟುಗಳ ಸಾಮೂಹಿಕ ಉಪನಯನ ನಡೆಯಿತು. ಹಯವದನ ತಂತ್ರಿ, ಪ್ರವೀಣ ಭಟ್​, ಶ್ರೀಪತಿ ಭಟ್​, ಕೆ.ಜ್ಯೋತಿಪ್ರಸಾದ್​ ವಿ. ಶೆಟ್ಟಿಗಾರ್​, ಕೆ. ಅಶೋಕ್​ ಶೆಟ್ಟಿಗಾರ್​, ಶ್ರೀಧರ್​ ಶೆಟ್ಟಿಗಾರ್​ ಇತರರಿದ್ದರು.
ಉಡುಪಿಯ ಸಂತೆಕಟ್ಟೆ ಕಲ್ಯಾಣಪುರದ ದೇವಾಲಯದಲ್ಲಿ ಪದ್ಮಶಾಲಿ ಸಮಾಜದ 14 ವಟುಗಳ ಸಾಮೂಹಿಕ ಉಪನಯನ ನಡೆಯಿತು. ಹಯವದನ ತಂತ್ರಿ, ಪ್ರವೀಣ ಭಟ್​, ಶ್ರೀಪತಿ ಭಟ್​, ಕೆ.ಜ್ಯೋತಿಪ್ರಸಾದ್​ ವಿ. ಶೆಟ್ಟಿಗಾರ್​, ಕೆ. ಅಶೋಕ್​ ಶೆಟ್ಟಿಗಾರ್​, ಶ್ರೀಧರ್​ ಶೆಟ್ಟಿಗಾರ್​ ಇತರರಿದ್ದರು.
Published on

* ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯ

ಉಡುಪಿ: ತಾಲೂಕಿನ ಸಂತೆಕಟ್ಟೆ ಕಲ್ಯಾಣಪುರದಲ್ಲಿರುವ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಪದ್ಮಶಾಲಿ ಸಮಾಜದ ವಟುಗಳಿಗಾಗಿ ಸಾಮೂಹಿಕ ಬ್ರಹ್ಮೋಪದೇಶ ನಡೆಯಿತು.
ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ವೇದಮೂರ್ತಿ ಹಯವದನ ತಂತ್ರಿ ಪೌರೋಹಿತ್ಯದಲ್ಲಿ ಉಪನಯನ ಕಾರ್ಯ ನೆರವೇರಿತು. ದೇವಸ್ಥಾನದ ಅರ್ಚಕರಾದ ಪ್ರವೀಣ ಭಟ್​, ಶ್ರೀಪತಿ ಭಟ್​ ಮತ್ತು ಇನ್ನಿತರರು ಪೌರೋಹಿತ್ಯದಲ್ಲಿ ಸಹಕರಿಸಿದರು.
ವೀರಭದ್ರನ ಸನ್ನಿಧಾನದಲ್ಲಿ ಪ್ರಾರ್ಥನೆಯ ಮೂಲಕ ಸಾಮೂಹಿಕ ಉಪನಯನ ಕಾರ್ಯ ಆರಂಭಿಸಲಾಯಿತು. ಪದ್ಮಶಾಲಿ ಸಮಾಜದ ಬೇರೆ ಬೇರೆ ದೇವಸ್ಥಾನಗಳ 14 ಬ್ರಹ್ಮಚಾರಿಗಳಿಗೆ ಅವರ ಪಾಲಕರ ಉಪಸ್ಥಿತಿಯಲ್ಲಿ ಯಜ್ಞೋಪವೀತ ಧಾರಣೆ ಮಾಡಲಾಯಿತು.
 
ದೇವಸ್ಥಾನದ ಆಡಳಿತ ಮಂಡಳಿಯ ಪ್ರಧಾನ ಮೊಕ್ತೇಸರ ಕೆ.ಜ್ಯೋತಿಪ್ರಸಾದ್​ ವಿ. ಶೆಟ್ಟಿಗಾರ್​, ಕಾರ್ಯದರ್ಶಿ ಕೆ. ಅಶೋಕ್​ ಶೆಟ್ಟಿಗಾರ್​ ಅಂಬಲಪಾಡಿ, ಕೋಶಾಧಿಕಾರಿ ಶ್ರೀಧರ್​ ಶೆಟ್ಟಿಗಾರ್​ ಕೊಡಂಕೂರು, ಜತೆ ಕಾರ್ಯದರ್ಶಿ ವೆಂಕಟ ಶೆಟ್ಟಿಗಾರ್​ ಶಾಂತಿನಗರ, ಸದಸ್ಯರಾದ ಆನಂದ್​ ಶೆಟ್ಟಿಗಾರ್​ ಬೈಲೂರು, ಶ್ರೀನಿವಾಸ್​ ಶೆಟ್ಟಿಗಾರ್​ ಪುತ್ತೂರು, ರಾಜೇಶ್​ ಶೆಟ್ಟಿಗಾರ್​ ಮಣ್ಣೋಲಿಗುಜ್ಜಿ, ಭಜನಾ ಮಂಡಳಿಯ ಅಧ್ಯಕ್ಷ ಗಣೇಶ್​ ಶೆಟ್ಟಿಗಾರ್​ ಪುತ್ತೂರು, ಪದ್ಮಶಾಲಿ ಯುವ ವೇದಿಕೆಯ ಅಧ್ಯಕ್ಷ ದಿನೇಶ್​ ಶೆಟ್ಟಿಗಾರ್​, ಶಿವರಾಂ ಶೆಟ್ಟಿಗಾರ್​ ಪಣಿಯಾಡಿ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net