ಕಾಸರಗೋಡು ಕಲೆಕ್ಟರೇಟ್ ಮುಖ್ಯ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, 36 ದೂರುಗಳಲ್ಲಿ ಎಂಟು ದೂರುಗಳನ್ನು ಪರಿಹರಿಸಲಾಗಿದೆ, ನಾಲ್ಕನ್ನು ಪೊಲೀಸ್ ವರದಿಗಾಗಿ ವರ್ಗಾಯಿಸಲಾಗಿದೆ ಮತ್ತು 24 ದೂರುಗಳನ್ನು ಮುಂದಿನ ಸಭೆಯಲ್ಲಿ ಪರಿಗಣಿಸಲಾಗುವುದು ಎಂದರು. ಕೌಟುಂಬಿಕ ಸಮಸ್ಯೆಗಳು, ಆಸ್ತಿ ವಿವಾದ ಮತ್ತು ನೆರೆಹೊರೆಯವರಿಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಬಂದಿದ್ದವು. ಆಯೋಗದ ಅಫ್ಜಲ್ ರಫಿ, ಸತೀಶ್ ಕುವಾರ್ ಇದ್ದರು.