ಗ್ರಾಮದಲ್ಲಿ ಗಾಂಜಾ ಹಾವಳಿ!

 ಕೋಟೆಬಾಗಿಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ವಾಸಿಕ ಕುಂದುಕೊರತೆ ಸಭೆ ನಡೆಯಿತು. ಪ್ರಮುಖರಾದ ನಂಜಾ ನಾಯ್ಕ, ವಿಲ್ಫ್ರೆಡ್ ಡಿಸೋಜ, ರಾಜು ಬೋವಿ ಮೊದಲಾದವರಿದ್ದರು.
ಕೋಟೆಬಾಗಿಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ವಾಸಿಕ ಕುಂದುಕೊರತೆ ಸಭೆ ನಡೆಯಿತು. ಪ್ರಮುಖರಾದ ನಂಜಾ ನಾಯ್ಕ, ವಿಲ್ಫ್ರೆಡ್ ಡಿಸೋಜ, ರಾಜು ಬೋವಿ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಗ್ರಾಮದಲ್ಲಿ ಗಾಂಜಾ ಹಾವಳಿ ಹೆಚ್ಚುತ್ತಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ವತಿಯಿಂದ ತಲ್ಲೂರು ಗ್ರಾಮದ ಕೋಟೆಬಾಗಿಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡದ ಮಾಸಿಕ ಕುಂದುಕೊರತೆ ಸಭೆಯಲ್ಲಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಸಭೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಹಲವು ವಿಷಯಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಗ್ರಾಮದಲ್ಲಿ ಹೆಚ್ಚುತ್ತಿರುವ ಗಾಂಜಾ ಹಾವಳಿಗೆ ತಕ್ಷಣ ಕಡಿವಾಣ ಹಾಕುವಂತೆ ವಿಜೇಂದ್ರ ಆಗ್ರಹಿಸಿದ್ದು, ಚೇತನ್ ಸೇರಿದಂತೆ ಹಲವರು ದನಿಗೂಡಿಸಿದರು.
ದಲಿತ ಮುಖಂಡ ಚಂದ್ರಮ ತಲ್ಲೂರು ಮಾತನಾಡಿ, ಗ್ರಾಮ ಪಂಚಾಯಿತಿಯ ಸರ್ಕಾರಿ ಹೌಸ್‌ಸೈಟ್‌ನಲ್ಲಿ ಮನೆ ನಿರ್ಮಿಸಿಕೊಂಡಿರುವ ಮಹಾಬಲ ಅವರಿಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜತೆಗೆ ತಲ್ಲೂರು ಗ್ರಾಮದ ದಲಿತರಿಗೆ ಚಾಲನಾ ಪರವಾನಗಿ ನೀಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಸಂಯುಕ್ತ ಶಿಬಿರವನ್ನು ಗ್ರಾಮದಲ್ಲಿಯೇ ಆಯೋಜಿಸಬೇಕು ಎಂದು ಮನವಿ ಮಾಡಿದರು.
ಬೀಟ್ ಪೊಲೀಸ್ ಸಿಬ್ಬಂದಿ ಗ್ರಾಮಸ್ಥರಿಗೆ ಅಗತ್ಯ ಸಮಯದಲ್ಲಿ ಲಭ್ಯರಾಗುವಂತೆ ಕ್ರಮ ಕೈಗೊಳ್ಳುವಂತೆ ಉಮೇಶ್ ಎಸ್.ಕೆ. ಕೋರಿದರು. ದೊಡ್ಡಮನೆ ಸಮೀಪ ಪಾಚಿ ಕಟ್ಟಿರುವ ಕಾಂಕ್ರೀಟ್ ರಸ್ತೆಯಲ್ಲಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಜಾರಿ ಬೀಳುತ್ತಿರುವ ಅಪಾಯದ ಬಗ್ಗೆ ಸಂಬಂಧಪಟ್ಟ ಇಲಾಖೆ ತುರ್ತು ಗಮನ ಹರಿಸಬೇಕೆಂದು ಕಾಲೇಜು ವಿದ್ಯಾರ್ಥಿ ಗೌತಮ್ ತಲ್ಲೂರು ಮನವಿ ಸಲ್ಲಿಸಿದರು.
ಠಾಣಾಧಿಕಾರಿ ನಂಜಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ದಲಿತ ಸಂರ್ಷ ಸಮಿತಿ(ಭೀಮಾ ರ್ಜನೆ) ರಾಜ್ಯ ಸಂಚಾಲಕ ಉದಯ್ ಕುವಾರ್ ತಲ್ಲೂರು ಮಾತನಾಡಿದರು.
ಎಎಸ್‌ಐ ವಿಲ್ಫ್ರೆಡ್ ಡಿಸೋಜ, ಎಎಸ್‌ಐ ರಾಜು ಬೋವಿ, ಪೊಲೀಸ್ ಸಿಬ್ಬಂದಿ ಚಂದ್ರ ಶೆಟ್ಟಿ, ಪ್ರವೀಣ್ ನೇಜಾ, ಹೆಡ್ ಕಾನ್‌ಸ್ಟೆಬಲ್ ಗಿರೀಶ್, ಜೈ ಕರ್ನಾಟಕ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುಧೀರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಕ್ಷಯ್ ಹಾಗೂ ಗ್ರಾಮಸ್ಥರಾದ ಜ್ಯೋತಿ, ಅಮೀನಾ, ಬಾಬಿ, ಪ್ರಕಾಶ್, ರಮೇಶ್, ಮಂಜು, ರಂಜೀತ್, ಬಾಲಚಂದ್ರ, ನಿತಿನ್, ಯೋಗೀಶ್, ಮುನ್ನ, ಗಗನ್ ಮೊದಲಾದವರಿದ್ದರು.

ಪರಿಶಿಷ್ಟ ಜಾತಿ, ಪಂಗಡದವರ ಕಾನೂನುಬದ್ಧ ಹಕ್ಕುಗಳು ಹಾಗೂ ರಕ್ಷಣಾ ಕ್ರಮಗಳ ಕುರಿತು ಅರಿವು ಅಗತ್ಯ. ಯಾವುದೇ ಸಮಸ್ಯೆ ಎದುರಾದಾಗ ತಕ್ಷಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಹಾಗೂ ಪೊಲೀಸ್ ಸಹಾಯವಾಣಿ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.

— ನಂಜ ನಾಯ್ಕ, ಠಾಣಾಧಿಕಾರಿ

ಗ್ರಾಮಸ್ಥರು ಯಾವುದೇ ಸಮಸ್ಯೆಯನ್ನು ನೇರವಾಗಿ ಠಾಣಾಧಿಕಾರಿ ಗಮನಕ್ಕೆ ತರಬೇಕು. ಹೊರಗಿನಿಂದ ಬರುವವರು ಅಹಿತಕರ ಚಟುವಟಿಕೆಗಳಲ್ಲಿ ತೊಡಗುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಬೇಕು.

— ಉದಯ್ ಕುಮಾರ್ ತಲ್ಲೂರು ಕರ್ನಾಟಕ ದಲಿತ ಸಂರ್ಷ ಸಮಿತಿ(ಭೀಮಾ ಘರ್ಜನೆ) ರಾಜ್ಯ ಸಂಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net