ಅಮೃತ ಭಾರತಿ ವಿದ್ಯಾಲಯಕ್ಕೆ ಹಲವು ಬಹುಮಾನ

 ಹೆಬ್ರಿ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಪಡೆದ ಪಿ.ಆರ್.ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ವಾಧ್ಯಮ ಶಾಲೆ ವಿದ್ಯಾರ್ಥಿಗಳು
ಹೆಬ್ರಿ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಪಡೆದ ಪಿ.ಆರ್.ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ವಾಧ್ಯಮ ಶಾಲೆ ವಿದ್ಯಾರ್ಥಿಗಳು
Published on
ಹೆಬ್ರಿ: ಕಾರ್ಕಳ ಶಾಲಾ ಶಿಕ್ಷಣ ಇಲಾಖೆ ಮತ್ತು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ನಡೆಸಿದ ಹೆಬ್ರಿ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಿಆರ್‌ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ವಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುವಾನ ಪಡೆದಿದ್ದಾರೆ.

ಪ್ರೌಢಶಾಲಾ ವಿಭಾಗ

ಸಂಸ್ಕೃತ ಭಾಷಣದಲ್ಲಿ ಪ್ರಣಮ್ಯಾ ಕೆ, ಭರತನಾಟ್ಯದಲ್ಲಿ ಸೌಂದರ್ಯ ಎಂ.ಆರ್. ಪ್ರಥಮ, ಮಿಮಿಕ್ರಿಯಲ್ಲಿ ನಮನ್, ಇಂಗ್ಲಿಷ್ ಭಾಷಣದಲ್ಲಿ ಅವನಿ ಶೆಟ್ಟಿ, ಸಾಮೂಹಿಕ ಜಾನಪದ ನೃತ್ಯದಲ್ಲಿ ಆಮಿಷಾ, ಅನ್ವಿತಾ, ಸ್ತುತಿ, ಸಹನಾ, ಭೂಮಿಕಾ ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿತು.
ಹಿರಿಯ ಪ್ರಾಥಮಿಕ ವಿಭಾಗ: ಅಭಿನಯ ಗೀತೆಯಲ್ಲಿ ಪ್ರಾರ್ಥನಾ ಪ್ರಥಮ, ಆಶುಭಾಷಣದಲ್ಲಿ ಕೃಷ್ಣ ಓಕುಡ, ಕನ್ನಡ ಕಂಠಪಾಠದಲ್ಲಿ ಯಾದ್ವಿ ದ್ವಿತೀಯ, ಭಕ್ತಿಗೀತೆಯಲ್ಲಿ ಅಪೂರ್ವಾ ದ್ವಿತೀಯ, ದೇಶಭಕ್ತಿ ಗೀತೆಯಲ್ಲಿ ಆರಾಧ್ಯಾ ದ್ವಿತೀಯ, ಇಂಗ್ಲಿಷ್ ಕಂಠಪಾಠದಲ್ಲಿ ಮನಸ್ವಿ ಉಡುಪ ತೃತೀಯ, ಕ್ಲೇ ವಾಡೆಲ್‌ನಲ್ಲಿ ಶುಭಧರ ತೃತೀಯ ಸ್ಥಾನ ಪಡೆದಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗ: ಧಾರ್ಮಿಕ ಪಠಣದಲ್ಲಿ ಶ್ರೇಯಾ ಭಟ್ ದ್ವಿತೀಯ, ಆಶುಭಾಷಣದಲ್ಲಿ ಸಮರ್ಥ್ ಪೈ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net