ಜಿಲ್ಲೆಯಲ್ಲಿರುವ ವಿಶ್ವ ವಿದ್ಯಾಲಯಗಳು, ಮಠಗಳು, ಶಿಲ್ಪಿಗಳು, ಜೋತಿಷ್ಯರು, ಅರ್ಚಕರ ಮನೆಗಳು, ಸಾಂಸ್ಥಿಕ ಭಂಡಾರಗಳು, ದೇವಾಲಯಗಳು, ಗ್ರಂಥಾಲಯಗಳು, ಆಶ್ರಮಗಳು, ಜೈನ ಬಸದಿಯವರು, ಆಯುರ್ವೇದ ಪಂಡಿತರು, ಖಾಸಗಿ ವ್ಯಕ್ತಿಗಳು ತಮ್ಮ ಸಂಗ್ರಹದಲ್ಲಿ ಹಳೆಯ ಕೈಬರಹ, ಹಸ್ತಪ್ರತಿ ದಾಖಲೆಗಳು ಲಭ್ಯವಿದ್ದಲ್ಲಿ ನೇರವಾಗಿ ಜ್ಞಾನ ಭಾರತಂ ಆ್ಯಪ್ ಮೂಲಕ ಅಪ್ಲೋಡ್ ಮಾಡಬಹುದಾಗಿದೆ. ಜೊತೆಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಲ್ಲಿ ಸಮೀಕ್ಷೆದಾರರು ತಮ್ಮಲ್ಲಿಗೆ ಬಂದು ದಾಖಲಿಸಿಕೊಳ್ಳಲಿದ್ದಾರೆ. ಡಿಜಿಟಲೀಕರಣ ಗೊಳಿಸಿದ ನಂತರ ತಮ್ಮ ಮೂಲ ಹಸ್ತಪ್ರತಿಗಳಿಗೆ ಹಾನಿಯಾಗದಂತೆ ಸುರಕ್ಷಿತವಾಗಿ ವಾಪಸು ನೀಡಲಾಗುವುದು ಎಂದರು.