ಉಡುಪಿಯಲ್ಲಿ ನಡೆದ ಆನಂದೋತ್ಸವ ಸಮಾರೋಪದಲ್ಲಿ ಮನೋಹರ್ ಎಸ್. ಶೆಟ್ಟಿ ಅವರಿಗೆ 'ತಲ್ಲೂರ್ಸ್ ಸಂಸ್ಕೃತಿ ಸಾಧಕ' ಪ್ರಶಸ್ತಿ ನೀಡಲಾಯಿತು. ಅನುರಾಧಾ ಶೆಟ್ಟಿ, ಡಾ. ಎಚ್.ಎಸ್. ಬಲ್ಲಾಳ್, ಡಾ. ತಲ್ಲೂರು ಶಿವರಾಂ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಗಿರಿಜಾ ಶೆಟ್ಟಿ, ಶಿವಪ್ರಸಾದ್ ಎಸ್. ಶೆಟ್ಟಿ, ಗೋಪಾಲ್ ಗಾಣಿಗ, ಭಾಸ್ಕರ ರಾವ್ ಕಿದಿಯೂರು, ಎನ್.ಆರ್. ಬಲ್ಲಾಳ್, ಪ್ರದೀಪ್ ಚಂದ್ರ ಕುತ್ಪಾಡಿ, ಶ್ರೀಪಾದ ಭಟ್ ಇದ್ದರು.
Published on:
Copied
Follow Us
* ಡಾ.ಎಚ್.ಎಸ್. ಬಲ್ಲಾಳ್ ಅಭಿಪ್ರಾಯ
* 'ತಲ್ಲೂರ್ಸ್ ಸಂಸ್ಕೃತಿ ಸಾಧಕ' ಪ್ರಶಸ್ತಿ ಪ್ರದಾನ
* ಎರಡು ದಿನಗಳ ಆನಂದೋತ್ಸವ ಸಂಪನ್ನ
ಉಡುಪಿ: ಉಡುಪಿಯಲ್ಲಿ ರಂಗಭೂಮಿ, ಯಕ್ಷಗಾನ ಇನ್ನಿತರ ರಂಗ ಕಲೆಗಳು ಸಮೃದ್ಧವಾಗಿ ಬೆಳೆಯುವಲ್ಲಿ ಇಲ್ಲಿನ ಸಂಘ-ಸಂಸ್ಥೆಗಳು, ಉದ್ಯಮಿಗಳು ನೀಡಿರುವ ಪ್ರೋತ್ಸಾಹ ಕಾರಣವಾಗಿದೆ. ಮಾನವ ತನ್ನ ಒಳ್ಳೆಯ ಕಾರ್ಯಗಳಿಂದ ಸಮಾಜಕ್ಕೆ ದೊಡ್ಡ ಆಸ್ತಿಯಾಗುತ್ತಾನೆ. ನಾಟಕ, ರಂಗಭೂಮಿ, ಯಕ್ಷಗಾನ ಮೊದಲಾದ ರಂಗ ಕಲೆಗಳಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಭಿಪ್ರಾಯಪಟ್ಟರು.
ಉಡುಪಿಯ ಎಂಜಿಎಂ ಕಾಲೇಜ್ನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಸಂಸ್ಥೆಯ ಸ್ಥಾಪಕ ದಿ. ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಶುಕ್ರವಾರ (ಮೇ 1) ಸಂಜೆ ಆಯೋಜಿಸಿದ್ದ ಎರಡು ದಿನಗಳ ರಂಗಭೂಮಿ ಆನಂದೋತ್ಸವದ ಸಮಾರೋಪ ಸಮಾರಂಭದಲ್ಲಿ ಉಡುಪಿಯ ಸಾಯಿರಾಧ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮನೋಹರ್ ಎಸ್. ಶೆಟ್ಟಿ ಅವರಿಗೆ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಪ್ರಾಯೋಜಿತ "ತಲ್ಲೂರ್ಸ್ ಸಂಸ್ಕೃತಿ ಸಾಧಕ' ಪ್ರಶಸ್ತಿ ಪ್ರದಾನಗೊಳಿಸಿ ಮಾತನಾಡಿದರು.
ಸಮಾಜಕ್ಕೆ ಕಲಾವಿದರ ಕೊಡುಗೆ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮನೋಹರ್ ಎಸ್. ಶೆಟ್ಟಿ, ರಂಗಭೂಮಿ ನೀಡುವ ಉತ್ತಮ ಸಂದೇಶಗಳು ಸಮಾಜಕ್ಕೆ ದಾರಿದೀಪವಾಗಿವೆ. ರಂಗಭೂಮಿ ಉಡುಪಿ ಅನೇಕ ಪ್ರಬುದ್ಧ ಕಲಾವಿದರನ್ನು ಸಮಾಜಕ್ಕೆ ನೀಡಿದೆ. ಕುತ್ಪಾಡಿ ಆನಂದ ಗಾಣಿಗ ಅವರು ರಂಗಭೂಮಿ ಕಟ್ಟಿ ಬೆಳೆಸಲು ವಹಿಸಿದ್ದ ಶ್ರಮವನ್ನು ಕಣ್ಣಾರೆ ಕಂಡಿದ್ದೇನೆ. ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನೀಡಿದ ಪ್ರಶಸ್ತಿಗೆ ಆಭಾರಿಯಾಗಿದ್ದೇನೆ ಎಂದರು.
15 ಸಾಧಕರಿಗೆ ಪ್ರಶಸ್ತಿ
ರಂಗಭೂಮಿ ಉಡುಪಿ ಅಧ್ಯಕ್ಷ ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ. ತಲ್ಲೂರು ಶಿವರಾಂ ಶೆಟ್ಟಿ ಮಾತನಾಡಿ, ಆನಂದ ಗಾಣಿಗರು 45 ವರ್ಷ ರಂಗಭೂಮಿ ಉಡುಪಿ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ತಮ್ಮನ್ನೇ ಅರ್ಪಿಸಿಕೊಂಡ ಮಹಾನುಭಾವರು. ಅವರ ನೆನಪಿನ ಈ ಕಾರ್ಯಕ್ರಮದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತಿದ್ದೇವೆ. ಈವರೆಗೆ 15 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ ಎಂದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಸುಧಾಕರ್ ಶೆಟ್ಟಿ ಮಾತನಾಡಿದರು.
ಟ್ರಸ್ಟ್ನ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಎಸ್. ಶೆಟ್ಟಿ, ಅಲಯನ್ಸ್ ಉಡುಪಿ ಜಿಲ್ಲಾ ಗವರ್ನರ್ ಸುನೀಲ್ಕುಮಾರ್ ಶೆಟ್ಟಿ, ಆನಂದ ಗಾಣಿಗರ ಅಳಿಯ ಗೋಪಾಲ ಗಾಣಿಗ, ರಂಗಭೂಮಿ ಉಡುಪಿ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎನ್.ಆರ್. ಬಲ್ಲಾಳ್, ಅನುರಾಧಾ ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.
ಲೇಖಕಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಅನೂಷಾ ಆಚಾರ್ ಪ್ರಶಸ್ತಿ ಪತ್ರ ವಾಚಿಸಿದರು. ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ವಂದಿಸಿದರು.