ಕಾಸರಗೋಡು: ಕಾಸರಗೋಡು ಎಂ.ಜಿ. ರಸ್ತೆಯ ಸಿಟಿ ಟವರ್ ಎದುರು ಭಾಗದಲ್ಲಿ ರಸ್ತೆ ಮಧ್ಯೆಯೇ ವ್ಯಾನ್‌ಹೋಲ್ ಕುಸಿದು ಬಾಯ್ತೆರೆದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮುನ್ನೆಚ್ಚರಿಕೆ ಕ್ರಮಮವಾಗಿ ಸುತ್ತಲೂ ಸೂಚನಾ ಫಲಕ ಅಳವಡಿಸಲಾಗಿದೆ.
ಎಂ.ಜಿ. ರೋಡ್ ಅತ್ಯಂತ ವಾಹನ ದಟ್ಟಣೆಯಿಂದ ಕೂಡಿರುವ ಪ್ರದೇಶ. ರಸ್ತೆ ಹದಗೆಟ್ಟು ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ. ಏಕಮುಖ ಸಂಚಾರದ ಈ ರಸ್ತೆಯಲ್ಲಿ ಈಗ ಮ್ಯಾನ್‌ಹೋಲ್ ಕುಸಿದಿರುವುದು ವಾಹನ ಸವಾರರಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.
ಟ್ರಾಫಿಕ್ ಪೊಲೀಸರು ಕುಸಿದ ಜಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಶೀಘ್ರವೇ ಮ್ಯಾನ್‌ಹೋಲ್ ದುರಸ್ತಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.