ಚೆಸ್​ ಆಟದಂತಿರಬೇಕು ಪ್ರತಿಭಟನೆಯ ಸ್ವರೂಪ

ಉಡುಪಿಯ ಪಿಪಿಸಿಯಲ್ಲಿ ಆಯೋಜಿಸಿದ್ದ ಮಂಗಳೂರು ವಿವಿ ಅಂತರ್​ ಕಾಲೇಜ್​ಗಳ ಚೆಸ್​ ಕ್ರೀಡಾಕೂಟವನ್ನು ವಿಶ್ವಪ್ರಿಯ ಶ್ರೀ ಉದ್ಘಾಟಿಸಿದರು. ಯಶ್​ಪಾಲ್​ ಸುವರ್ಣ, ಪ್ರಶಾಂತ್​ ಹೊಳ್ಳ, ರಾಮು ಎಲ್​., ಸುರೇಶ್​ ತುಂಗ, ಡಾ. ಚಂದ್ರಕಾಂತ್​ ಭಟ್​, ರಾಘವೇಂದ್ರ ಎಲ್., ಸೂರಜ್​ ಎಂ. ಇದ್ದರು.
ಉಡುಪಿಯ ಪಿಪಿಸಿಯಲ್ಲಿ ಆಯೋಜಿಸಿದ್ದ ಮಂಗಳೂರು ವಿವಿ ಅಂತರ್​ ಕಾಲೇಜ್​ಗಳ ಚೆಸ್​ ಕ್ರೀಡಾಕೂಟವನ್ನು ವಿಶ್ವಪ್ರಿಯ ಶ್ರೀ ಉದ್ಘಾಟಿಸಿದರು. ಯಶ್​ಪಾಲ್​ ಸುವರ್ಣ, ಪ್ರಶಾಂತ್​ ಹೊಳ್ಳ, ರಾಮು ಎಲ್​., ಸುರೇಶ್​ ತುಂಗ, ಡಾ. ಚಂದ್ರಕಾಂತ್​ ಭಟ್​, ರಾಘವೇಂದ್ರ ಎಲ್., ಸೂರಜ್​ ಎಂ. ಇದ್ದರು.
Published on

* ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರ ಅನಿಸಿಕೆ

* ಮಂಗಳೂರು ವಿವಿ ಅಂತರ್​ ಕಾಲೇಜ್​ ಕ್ರೀಡಾಕೂಟ ಉದ್ಘಾಟನೆ

ಉಡುಪಿ: 'ಪೇಟ್​ ಕೇಲಿಯೇ ನೋಟ್​, ನೋಟ್​ ಕೇಲಿಯೇ ಸರ್ಕಾರೀ ಸೀಟ್​, ಸೀಟ್​ ಕೇಲಿಯೇ ನೀಟ್​ ಚಾಹಿಯೇ' ಎಂಬ ಹೊಸ ಮಾತು ಚಾಲ್ತಿಯಲ್ಲಿದೆ. ಆದರೆ, ನೀಟ್​ ವಿಚಾರದಲ್ಲಿ ಸರ್ಕಾರ ಎಡವಿದೆ. ಮಕ್ಕಳ ಭವಿಷ್ಯ ಹಾಳಾಗಿದ್ದು ಕಂಡು ನೋವಾಗಿದೆ. ದೆಹಲಿಯಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೊಳಿಸಿ ಝೆನ್​-ಜಿ ನಡೆಸಿದ್ದ ಪ್ರತಿಭಟನೆಯ ರೀತಿ ಸರಿ ಇರಲಿಲ್ಲ. ಯಾವುದೇ ಹಾನಿ, ದೈಹಿಕ ನೋವಿಲ್ಲದೆ ಎದುರಾಳಿಯ ಸೋಲಿಸುವ ಚೆಸ್​ ಆಟದಂತಿರಬೇಕು ಪ್ರತಿಭಟನೆಯ ಸ್ವರೂಪ. ಸೋತೆವೆಂದು ಚೆಸ್​ ಕೈಬಿಡಬೇಡಿ. ಈ ಆಟದಲ್ಲಿ, ಓದಿನಲ್ಲಿ, ತಂದೆ-ತಾಯಿಯಲ್ಲಿ ಹಾಗೂ ದೇಶದ ಮೇಲೂ ಮನಸ್ಸಿಡಿ ಎಂದು ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಪೂರ್ಣಪ್ರಜ್ಞಾ ಕಾಲೇಜ್​ನ ಸಭಾಂಗಣದಲ್ಲಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜ್​ನ ವತಿಯಿಂದ ಸಂಸ್ಥೆಯ ವಜ್ರ ಮಹೋತ್ಸವದ ಸಂದರ್ಭದಲ್ಲಿ ಶುಕ್ರವಾರ (ಸೆ.11) ಆಯೋಜಿಸಿದ್ದ 2 ದಿನಗಳ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್​ ಕಾಲೇಜ್​ಗಳ ಪುರುಷ&ಮಹಿಳಾ ವಿಭಾಗದ ಚೆಸ್​ ಚಾಂಪಿಯನ್​ಶಿಪ್​ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಾದರಿ ಕಾಲೇಜ್​ ಪಿಪಿಸಿ
ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಶಿಕ್ಷಣದೊಂದಿಗೆ ಕ್ರೀಡೆ, ಕಲೆ ಹಾಗೂ ಸಂಸ್ಕೃತಿಯಲ್ಲಿ ಮಕ್ಕಳನ್ನು ಸಂಪೂರ್ಣ ತೊಡಗಿಸಿಕೊಳ್ಳುವ ಮೂಲಕ ಪೂರ್ಣಪ್ರಜ್ಞ ಕಾಲೇಜ್​ ಮಾದರಿಯಾಗಿದೆ. ನಾನಿಂದು ಶಾಸಕನಾಗಿ ನಿಮ್ಮ ಮುಂದೆ ನಿಂತು ಮಾತನಾಡುತ್ತಿರುವುದರ ಹಿಂದೆ ಸಂಧ್ಯಾ ಕಾಲೇಜ್​ನ ಆಶೀರ್ವಾದವಿದೆ. ನಾನೂ ಸಹ ಇಲ್ಲಿಯೇ ಕಲಿತವನು. ಚೆಸ್​ ಕ್ರೀಡೆ ಬುದ್ಧಿಮತ್ತೆಯ ಆಟವಾಗಿದ್ದು ರಾಜ್ಯ-ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಸಿಎ ಪ್ರಶಾಂತ್​ ಹೊಳ್ಳ, ಪೂರ್ಣಪ್ರಜ್ಞ ಕಾಲೇಜ್​ನ ಪ್ರಾಂಶುಪಾಲ ಪ್ರೊ.ರಾಮು ಎಲ್​., ಪೂರ್ಣಪ್ರಜ್ಞ ಪಿಯು ಕಾಲೇಜ್​ನ ಪ್ರಾಂಶುಪಾಲ ಸುರೇಶ್​ ತುಂಗ, ಕ್ರೀಡಾಕೂಟದ ಪರಿವೀಕ್ಷಕ ವಿವೇಕಾನಂದ ಕಾಲೇಜ್​ನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್​, ಕಾಲೇಜ್​ನ ಐಕ್ಯೂಎಸಿ ಸಂಯೋಜಕ ರಾಘವೇಂದ್ರ ಎಲ್​., ಸಂಧ್ಯಾ ಕಾಲೇಜ್​ನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್​ ಎಂ. ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸಿಂಚನಾ, ನವ್ಯಾ ಹಾಗೂ ಪ್ರಾಂಜಲಿ ಪ್ರಾರ್ಥಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ವಿನಾಯಕ್​ ಪೈ ಬಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಎ ಅಂತಿಮ ವಿದ್ಯಾರ್ಥಿ ದೇವರಾಜ್​ ಪುತ್ರನ್​ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಾಗರಾಜ್​ ವಂದಿಸಿದರು. 

'ಪೂರ್ಣ ಉತ್ಕರ್ಷ' ಗೌರವ

ರಾಷ್ಟ್ರ ಮಟ್ಟದಲ್ಲಿ ವಿವಿಧೆಡೆ ನಡೆದ ಚೆಸ್​ ಟೂರ್ನಾಮೆಂಟ್​ನಲ್ಲಿ ಸಾಧನೆ ಮಾಡಿದ ಕಾಲೇಜ್​ನ ಹಳೆಯ ವಿದ್ಯಾರ್ಥಿಗಳಾದ ದೇವಿದಾಸ್​ ಪೈ, ಸಾಕ್ಷತ್​ ಕುಮಾರ್​, ಪ್ರಜ್ವಲ್​ ನಾಯಕ್​, ವೃದ್ಧಿಕಾ ಶೆಟ್ಟಿ, ಮಹಿಮಾ, ಚಿತ್ಕಲಾಭಟ್​, ರಜಿನಿ, ಆವನಿ ಆಚಾರ್ಯ ಅವರಿಗೆ ವಿಶ್ವಪ್ರಿಯ ತೀರ್ಥರು 'ಪೂರ್ಣ ಉತ್ಕರ್ಷ' ಪ್ರಶಸ್ತಿ ನೀಡಿ ಗೌರವಿಸಿದರು. ಕ್ರೀಡಾಕೂಟದಲ್ಲಿ 62 ಕಾಲೇಜ್​ಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
"

ಮೊಬೈಲ್​ ಗೀಳಿನಿಂದ ಹೊರಬಂದು ಏಕಾಗ್ರತೆ ಸಾಧಿಸಲು ಚೆಸ್​ ಸಹಕಾರಿ. ಚೆಸ್​ನ ಕಾಯಿ ಹಿಡಿದರೆ ಮುಂದಡಿ ಇಡುತ್ತೇವೆಯೇ ಹೊರತು ಹಿಂದಡಿಯ ಮಾತೇ ಇಲ್ಲ. ಇದು ಪೂರ್ಣತ್ವದ ಕ್ರೀಡೆಯಾಗಿದ್ದು, ಜೀವನದಲ್ಲೂ ಸಮತೋಲನ ಸಾಧಿಸಲು ಪ್ರೇರಣೆ ನೀಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net