ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಸಾಧನೆಯ ದಾರಿ

ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್​ ಕಾಲೇಜ್​ಗಳ ಚೆಸ್​ ಪಂದ್ಯಾಟದ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಕುಂದಾಪುರದ ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜ್​ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಟಿ.ಪ್ರಶಾಂತ್​ ಹೊಳ್ಳ, ವಿಶಾಖ್​ ಶೆಟ್ಟಿ, ರವಿಶಂಕರ್​, ಪ್ರಸನ್ನ ರಾವ್​ ಬಿ., ಡಾ. ಚಂದ್ರಕಾಂತ ಭಟ್, ಡಾ. ರಾಘವೇಂದ್ರ ಎಲ್​., ಸೂರಜ್​ ಮರವಂತೆ ಇದ್ದರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್​ ಕಾಲೇಜ್​ಗಳ ಚೆಸ್​ ಪಂದ್ಯಾಟದ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಕುಂದಾಪುರದ ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜ್​ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಟಿ.ಪ್ರಶಾಂತ್​ ಹೊಳ್ಳ, ವಿಶಾಖ್​ ಶೆಟ್ಟಿ, ರವಿಶಂಕರ್​, ಪ್ರಸನ್ನ ರಾವ್​ ಬಿ., ಡಾ. ಚಂದ್ರಕಾಂತ ಭಟ್, ಡಾ. ರಾಘವೇಂದ್ರ ಎಲ್​., ಸೂರಜ್​ ಮರವಂತೆ ಇದ್ದರು.
Published on

ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ್​ ಹೊಳ್ಳ ಅಭಿಪ್ರಾಯ

* ಪಿಪಿಸಿಯಲ್ಲಿ ಚೆಸ್​ ಪಂದ್ಯಾಟದ ಸಮಾರೋಪ

ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಬಹುಮಾನ ಪಡೆಯುವುದಕ್ಕಿಂತಲೂ ಸ್ಪರ್ಧೆಯಿಂದ ಪಡೆಯುವ ಅನುಭವಗಳೆ ಜೀವನದ ಅವಿಸ್ಮರಣೀಯ ಕ್ಷಣಗಳಾಗಿರುತ್ತವೆ. ಅದರಲ್ಲೂ ಚೆಸ್​ನಂಥಹ ಕ್ರೀಡೆಯು ಮನಸ್ಸನ್ನು ಸದಾ ಜಾಗೃತವಾಗಿಸುತ್ತದೆ. ಸೋಲು-ಗೆಲುವಿಗಿಂತ ಹೆಚ್ಚಾಗಿ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಸಾಧನೆಯ ದಾರಿಯಾಗಿರುತ್ತದೆ ಎಂದು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ್​ ಹೊಳ್ಳ ಅಭಿಪ್ರಾಯಪಟ್ಟರು.
ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಶುಕ್ರವಾರ (ಸೆ.11)ದಿಂದ ಆರಂಭಗೊಂಡಿದ್ದ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್​ ಕಾಲೇಜ್​ಗಳ 2ದಿನದ ಚೆಸ್​ ಪಂದ್ಯಾಟದ ಸಮಾರೋಪದ ನಿಮಿತ್ತ ಶನಿವಾರ (ಸೆ.12) ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.

ಜೀವನದಲ್ಲೂ ಯಶಸ್ಸು

ಕಾಲೇಜ್​ನ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ವಿಶಾಖ್​ ಶೆಟ್ಟಿ ಮಾತನಾಡಿ, ಚೆಸ್​ ಪಂದ್ಯಾಟದಲ್ಲಿ ಆಲೋಚಿಸಿ ಇಡುವ ಪ್ರತಿ ಹೆಜ್ಜೆಯೂ ನಿರ್ಣಾಯಕವಾಗಿರುತ್ತದೆ. ಹಾಗೆಯೇ ಬದುಕಿನಲ್ಲಿಯೂ ಸಹ ಇದೇ ಬಗೆಯ ಶ್ರದ್ಧೆ, ಏಕಾಗ್ರತೆ ಹಾಗೂ ಬದ್ಧತೆಯಿಂದ ಆಲೋಚಿಸಿ ಹೆಜ್ಜೆ ಇಟ್ಟಲ್ಲಿ ಯಶಸ್ಸು ಖಂಡಿತ ಎಂದರು. 
ವಿಶ್ವ ವಿದ್ಯಾನಿಲಯದ ಪ್ರತಿನಿಧಿಗಳಾದ ರವಿಶಂಕರ್​, ಪ್ರಸನ್ನ ರಾವ್​ ಬಿ. ಮಾತನಾಡಿ, ಉತ್ತಮವಾಗಿ ಪಂದ್ಯಾಟ ಆಯೋಜಿಸಿರುವುದಕ್ಕೆ ಅಭಿನಂದಿಸಿದರು. ಕಾಲೇಜ್​ನ ಪ್ರಾಂಶುಪಾಲ ಡಾ. ಚಂದ್ರಕಾಂತ ಭಟ್​ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿ ಪ್ರಾಂಜಲಿ ಪ್ರಾರ್ಥಿಸಿದರು. ಕಾಲೇಜ್​ನ ಐಕ್ಯೂಎಸಿ ಘಟಕದ ಸಂಯೋಜಕ ಡಾ. ರಾಘವೇಂದ್ರ ಎಲ್​. ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್​ ಮರವಂತೆ ವಂದಿಸಿದರು. ನವ್ಯಾ ಹೆಬ್ಬಾರ್​ ಕಾರ್ಯಕ್ರಮ ನಿರೂಪಿಸಿದರು. 

ಮಂಗಳೂರು, ಕುಂದಾಪುರಕ್ಕೆ ಪ್ರಥಮ ಸ್ಥಾನ

ಮಹಿಳಾ ವಿಭಾಗದಲ್ಲಿ ಮಂಗಳೂರಿನ ದಯಾನಂದ ಪೈ ಪಿ.ಸತೀಶ್​ ಪೈ ಸ.ಪ್ರ.ದ ಕಾಲೇಜ್​ ಪ್ರಥಮ ಸ್ಥಾನ, ವಿವೇಕಾನಂದ ಕಾಲೇಜ್​ (ಸ್ವಾಯತ್ತ) ಪುತ್ತೂರು ದ್ವಿತೀಯ, ಎಸ್​ಡಿಎಂ ಕಾಲೇಜ್​ (ಸ್ವಾಯತ್ತ) ಉಜಿರೆ ತೃತೀಯ ಹಾಗೂ ಡಾ. ಬಿ.ಬಿ. ಹೆಗ್ಡೆ ಪ್ರ.ದ.ಕಾಲೇಜ್​ ಕುಂದಾಪುರ ಚತುರ್ಥ ಸ್ಥಾನ ಗಳಿಸಿತು. ಪುರುಷರ ವಿಭಾಗದಲ್ಲಿ ಕುಂದಾಪುರದ ಡಾ. ಬಿ.ಬಿ.ಹೆಗ್ಡೆ ಪ್ರ.ದ. ಕಾಲೇಜ್​ ಪ್ರಥಮ ಸ್ಥಾನ, ವಿವೇಕಾನಂದ ಕಾಲೇಜ್​ (ಸ್ವಾಯತ್ತ)ಪುತ್ತೂರು ದ್ವಿತೀಯ, ಭಂಡಾರ್​ಕಾರ್ಸ್​ ಕಾಲೇಜ್​ ಕುಂದಾಪುರ ತೃತೀಯ ಹಾಗೂ ಶ್ರೀ ಪೂರ್ಣಪ್ರಜ್ಞ ಕಾಲೇಜ್​ ಉಡುಪಿ ಚತುರ್ಥ ಸ್ಥಾನ ಗಳಿಸಿತು. ಪಂದ್ಯಾಟದಲ್ಲಿ 67 ಕಾಲೇಜ್​ಗಳ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net