ಪರ್ಕಳದಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆ ಕಲಾ ಕೌಸ್ತುಭ

ವೇದಿಕೆ ಅಧ್ಯಕ್ಷ ನಟರಾಜ್​ ಪರ್ಕಳ ಸುದ್ದಿಗೋಷ್ಠಿ.
ವೇದಿಕೆ ಅಧ್ಯಕ್ಷ ನಟರಾಜ್​ ಪರ್ಕಳ ಸುದ್ದಿಗೋಷ್ಠಿ.
Published on
ಉಡುಪಿ: ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆಯ 23ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಕಲಾ ಕೌಸ್ತುಭ ಸಾಂಸತಿಕ ಕಾರ್ಯಕ್ರಮ ಮೇ 17ರಂದು ಪರ್ಕಳದ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ಜರುಗಲಿದೆ ಎಂದು ವೇದಿಕೆ ಅಧ್ಯಕ್ಷ ನಟರಾಜ್​ ಪರ್ಕಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 10ಕ್ಕೆ ಸ್ಥಳಿಯ ಸಂಘ-ಸಂಸ್ಥೆಗಳ ಸಮನ್ವಯ ಸಭೆ ಏರ್ಪಡಿಸಲಾಗಿದ್ದು, ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಉದ್ಘಾಟಿಸಲಿರುವರು. ಅಂಬಾಭವನಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ಕಬ್ಯಾಡಿ ಅಧ್ಯಕ್ಷತೆ ವಹಿಸಲಿದ್ದು, ದೇವಾಲಯಗಳ ಸಂವರ್ಧನಾ ಸಮಿತಿ ಸಂಯೋಜಕ ಮನೋಹರ್​ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್ಸ್​ ಜಿಲ್ಲಾ ಗವರ್ನರ್​ ಲಯನ್​ ಸಪ್ನ ಸುರೇಶ್​, ಮಾಜಿ ನಗರಸಭಾ ಸದಸ್ಯ ಮಹೇಶ್​ ಠಾಕೂರ್​, ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್​ ಹೆಬ್ಬಾರ್​ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮ
ಮಧ್ಯಾಹ್ನ 3.30ಕ್ಕೆ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಸುಮಿತ್ರಾ ಆರ್​. ನಾಯಕ್​ ಸಾಂಸತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ತದನಂತರ ಭಾಗವತ ಗಣೇಶ್​ ಆಚಾರ್ಯ ಬಿಲ್ಲಾಡಿ ಅವರಿಂದ ಯಕ್ಷಗಾನ ವೈಭವ ಹಾಡುಗಾರಿಕೆ ನಡೆಯಲಿದೆ. ಸಂಜೆ 4.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕಿ ಡಾ. ಮಾಲತಿ ಆರ್​. ಭಟ್​, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಮಣ್ಯ ಜಿ. ಭಟ್​ ಕುರ್ಯ, ಶಿಕ್ಷಕಿ ವಂದನಾ ರೈ ಕಾರ್ಕಳ, ಡಿಜಿಟಲ್​ ಕ್ರಿಯೇಟರ್​ ಸಂಧ್ಯಾ ಕಾಮತ್​ ಹಾಗೂ ಮಹೇಶ್​ ಠಾಕೂರ್​ ಪರ್ಕಳ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭದಲ್ಲಿ ಗಣಪತಿ ವಿಗ್ರಹ ತಯಾರಕ ದೇವರಾಜ್​ ನಾಯಕ್​ ಸಣ್ಣಕ್ಕಿಬೆಟ್ಟು ಹಾಗೂ ಛಾಯಾಗ್ರಾಹಕ ನಿಧೀಶ್​ ಕುಮಾರ್​ ಪರ್ಕಳ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕ ಗೋಪಿ ಹಿರೇಬೆಟ್ಟು, ಪ್ರಮುಖರಾದ ರಾಜೇಶ್​ ನಾಯಕ್​ ಸಣ್ಣಕ್ಕಿಬೆಟ್ಟು, ಗಣೇಶ್​ ಸಣ್ಣಕ್ಕಿಬೆಟ್ಟು, ಸಂದೀಪ್​ ನಾಯ್ಕ ಕಬ್ಯಾಡಿ, ಗಜೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net