ಪ್ರದರ್ಶನದಲ್ಲಿ ಹಳೆಯ ಕಾಲದ ಫೋಟೋ ಸ್ಟ್ಯಾಂಡ್, ಮಣ್ಣಿನಿಂದ ತಯಾರಿಸಿದ ಬೃಹತ್ ಹಣತೆ, ನೀರಿನ ಕೊಡ, ಕಸಿನ ಮಳ್ಗಿ, ಸುಣ್ಣದ ಕೊಡ, ಪದಾರ್ಥದ ಅಳಗೆ, ಅಗುಷ್ಠಿ, ಮಿಂಚುಬಂಧಕ ಫೋನ್, ರಿಂಗ್ ಫೋನ್, ಕ್ವಾರ್ಡ್ಲೆಸ್ ಫೋನ್, ಹೂಂಟೆ ಕೋಲು, ಹೆಡ್ಗೆ ಕೈ, ಪಿಟ್ಲಿ, ಚಿನ್ನಿದಾಂಡು, ಸ್ವಾಂಟಿ, ಹಕ್ಕಿ ಬಾಲ, ಕೋಲಾಟದ ಕೋಲು, ನಾರು ಹಗ್ಗ, ಕಡ್ಡಿ ಚಾಪೆ, ಕಂಬಳಿ ಕಡ್ಡಿ, ಹುರಿ ಹಗ್ಗದ ಮ್ಯಾಟ್, ಗೆರ್ಸಿ, ಪಾತ್ರೆಸಿಕ್ಕ, ಶೆಬೆ, ಕತ್ತದ ಬ್ರಷ್, ಮಣ್ಣು ಎಳೆಯುವ ಕೊಕ್ಕೆ, ವ್ಯಾಸಪೀಠ, ಮರದ ಕಳ್ಳೆ, ಅಚ್ಚೇರು, ಸೇರು, ಕೊಳಗ, ಕಳಸಿಗೆ ಕೋಲು, ರೇಡಿಯೋ, ಒರಗಲ್ಲು, ಲಾಟನ್ನು, ಕೂರಿಗೆ, ದುಡ್ಡಿನ ಪೆಟ್ಟಿಗೆ, ಸೊಂಟದ ಸುಣ್ಣದ ಅಂಡೆ, ಪಡಗ, ಬಿದಿರಿನ ಸಿಬ್ಬಲು, ಬೆಣಗಲ್ಲು ಪುಡಿ, ತಕ್ಕಡಿ, ಕಣಸೆ, ಗರಗಸ, ಮರದ ಪರ್ಟಿನ ಬ್ಯಾಟ್, ಕೊಂತಳ್ಕಿ ಸೂಡಿ, ಚಾಪರ್ಕಿ ಸೂಡಿ, ಕೆದ್ಲು, ಮುಳಿ ಹುಲ್ಲಿನ ಪೊರಕೆ, ಅಡಕೆ ಪೊರಕೆ, ತೆಂಗಿನ ಪೊರಕೆ, ಹಾಳೆಯ ಕಡ್ಡಿ, ಅಡಕೆ ಹಾಳೆಯ ಚಪ್ಪಲಿ, ಬೀಡಿಸೂಪ್, ಕುಕ್ಕೆ, ಮೀನಿನ ಸಿಕ್ಕ, ಕರಟದ ಗಾಡಿ, ಜೊತಕ, ತಳಕಿ ಬಳ್ಳಿ, ಲಗೋರಿ ಕಲ್ಲು, ಬಾಯಿ ಕತ್ತಿ, ಕತ್ತಿ ಅಣಸು, ಕೈಚೀಲ, ದೀಪದ ಕಾಲು, ಚಿಮಣಿ, ಕಬ್ಬಿಣದ ರಾಟೆ, ಪಟ್ಟೆ ನೂಲು, ಮುಡಿಸಾಹಿತ್ಯ, ಕರಟದ ಚಿಪ್ಪು, ವಿಭೂತಿ ಕರಡಿಕೆ, ಚೆನ್ನೆಮಣೆ, ಕಡಗೋಲು, ಕೈಬಟ್ಟಲು, ಸಾಂಬಾರು ಬಟ್ಟಲು, ಉಪ್ಪಿನಕಾಯಿ ಚಟ್ಟಿ, ದಾಲ್ಕಿನ್ನಿ ಕೊರಡು, ಅಕ್ಕಚ್ಚಿನ ಕೊರಡು, ಕಡಗಲ್ಲು ಮಗು, ಮೀನುಗೂಳಿ, ಏಡಿಗೂಳಿ, ಗೊರ್ಬು, ನೊಗ, ಮೀನು ಗಾಳ, ಓಲಿ ಕೊಡೆ, ಕೃಷಿ ಪರಿಕರಗಳು ಹೀಗೆ ವೈವಿಧ್ಯಗಳಿಂದ ಕೂಡಿದೆ.